ಬೆಂಗಳೂರು: ಹುಬ್ಬಳ್ಳಿ ಘಟನೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಎಲ್ಲರನ್ನು ಅರೆಸ್ಟ್ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದೆಲ್ಲಾ ತನಿಖೆಯಾಗ್ತಿದ. ಯಾರು ನಾಯಕರಿದ್ದಾರೆ ಎಲ್ಲವೂ ತನಿಖೆ ನಂತರ ಗೊತ್ತಾಗಲಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ತನಿಖೆ ನಡೆಯಲಿದೆ. ಪಿಎಸ್ಐ ವಿಚಾರ ನಮ್ಮ ಗೃಹ ಸಚಿವರ ಗಮನಕ್ಕೆ ಬಂದ ನಂತರ ದೂರು ಬಮನದ ಕೂಡಲೇ ಅದನ್ನು ಗೃಹ ಸಚಿವರು ಪೊಲೀಸರಿಗೆ ಕೊಟ್ಟಿದ್ದಾರೆ. ನಾವೇ ಅದನ್ನು ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ದೂರು ಕೊಟ್ಟಿರುವುದು. ಅದರ ಹಿಂದೆ ಯಾರೇ ಇರಲಿ ಶಿಕ್ಷೆಯಾಗಲಿದೆ ಎಂದಿದ್ದಾರೆ.
ಇನ್ನು ಪಿಎಸ್ಐ ಪರೀಕ್ಷೆಯಲ್ಲಿ ಅರೆಸ್ಟ್ ಆದವರ ಬಗ್ಗೆ ಮಾತನಾಡಿದ್ದು, ಯಾವ್ಯಾವ ಸೆಂಟರ್ ನಲ್ಲಿ ಎಕ್ಸಾಮಿನೇಷನ್ ಆಗಿದೆ. ಅಲ್ಲಿ ಏನಾದ್ರೂ ಪ್ರಾಬ್ಲಮ್ ಆಗಿದ್ರೆ. ಸೂಪರ್ ವೈಸರ್ ಲೆವೆಲ್ ನಲ್ಲಿ ಪ್ರಾಬ್ಲಮ್ ಇದ್ರೆ, ಮೇಲಾಧಿಕಾರಿಗಳಿಂದ ತೊಂದರೆ ಇದ್ರೆ ಸಮಗ್ರವಾಗಿ ತನಿಖೆಯಾಗಲಿದೆ. ಆ ಬಗ್ಗೆ ಆದೇಶವನ್ನು ಕೊಟ್ಟಿದ್ದೇವೆ. ಬೇರೆ ಪಕ್ಷದ ಸರ್ಕಾರವಿದ್ದಿದ್ರೆ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾ ಇದ್ರು. ಇವತ್ತು ನಮಗೆ ಬಂದ ಕೂಡಲೇ ಸಿಐಡಿಗೆ ಕೊಟ್ಟು ಮುಕ್ತವಾಗಿ ಅವಕಾಶವನ್ನು ನೀಡಿದ್ದೇವೆ. ಅವರು ಅವರ ಕೆಲಸವನ್ನು ಮಾಡುತ್ತಾ ಇದ್ದಾರೆ. ಯಾರೇ ತಪ್ಪಿತಸ್ಥರಿರಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.
ಸಿಐಡಿ ವರದಿ ಬಂದ ಕೂಡ ಯಾವ ರೀತಿಯಾಗಿದೆ, ಎಷ್ಟು ಪರ್ಸೆಂಟ್ ಇದೆ ಇಡೀ ಸೆಂಟರ್ ನಲ್ಲಿ ಆಗಿದೆಯಾ, ಒಂದು ಸೆಂಟರ್ ನಲ್ಲಿ ಆಗಿದೆಯಾ ಎಂಬುದನ್ನು ವರದಿ ನೀಡಿದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.