ಬೆಂಗಳೂರು: ರಾಘವೇಂದ್ರ ಸ್ವಾಮಿ ಪೀಠಿಕೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್, ಇದು ಖಾಸಗಿ ಕಾರ್ಯಕ್ರಮ. ಇಲ್ಲಿ ರಾಮನನ್ನು ಆರಾಧಿಸುವವರಡಲ್ಲರೂ ಬರಬಹುದು. ಇದಕ್ಕೆ ವ್ಯಾಪಾರ ಸೇರಿದಂತೆ ಯಾವ ರೀತಿಯ ನಿರ್ಬಂಧವೂ ಇರುವುದಿಲ್ಲ. ಯಾವುದೇ ಜಾತಿ ಧರ್ಮಕ್ಕೆ ನಿರ್ಬಂಧ ಇರಲ್ಲ. ಎಲ್ಲಾ ಧರ್ಮದವರು, ರಾಮನನ್ನು ಪ್ರೀತಿಸುವ ಎಲ್ಲಾ ಜನರು ಮಳಿಗೆಯನ್ನು ಹಾಕಬಹುದು.
ರಾಮ ಭಾರತದ ಆದರ್ಶ ಪುರುಷ. ಈಗ ಸರ್ಕಾರದ ವತಿಯಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಅಲ್ಲಿನ ಮುಖ್ಯಮಂತ್ರಿಗಳೇ ಮುಂಚೂಣಿಯಲ್ಲಿದ್ದಾರೆ. ಪ್ರಧಾನಮಂತ್ರಿಯವರು ಉದ್ಘಾಟನೆ ಮಾಡಿದ್ದಾರೆ. ನನ್ನ ಮನೆಯ ದೇವರು ಆಂಜನೇಯ. ನಾನು ಆಂಜನೇಯ ಆಗಿರುವ ಕಾರಣ ರಾಮನ ಭಕ್ತ ಆಗಲೇಬೇಕು. ಬೇರೆಯವರಿಗೆ ಬೇಕಾದರೇ ಪ್ರಶ್ನೆ ಮಾಡಿ. ನಮ್ಮನೆ ದೇವರು ಆಂಜನೇಯನೇ ಆಗಿರುವ ಕಾರಣ ಇದಕ್ಕೆ ಯಾರು ಪ್ರಶ್ನೆ ಮಾಡುವಂತ ಅಧಿಕಾರ ಇಲ್ಲ. ನಾನು ರಾಮನ ಭಕ್ತ ಆಂಜನೇಯ ಎಂದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ನಡೆದ ಕೆಲವೊಂದು ಅಹಿತಕರ ಘಟನೆ ಬಗ್ಗೆ ಮಾತನಾಡಿ, ಯಾವುದೇ ಕೊಲೆ ಆಗಲಿ, ಅಪರಾಧವಾಗಲಿ ಅದನ್ನು ಕಾನೂನು ದೃಷ್ಟಿಯಲ್ಲೇ ನೋಡಬೇಕು. ಯಾವುದೇ ರೀತಿಯ ಬಣ್ಣ ಬರುವುದು ಬೇಡ. ಅವರು ಹಿಂದೂ ಆಗಲಿ, ಮುಸ್ಲಿಂ ಆಗಲಿ, ಕ್ರಿಶ್ಚಿಯನ್ ಆಗಲಿ ಎಲ್ಲರೂ ಒಂದೆ. ಕಾನೂನು ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೆ. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿದೆ. ಹಿಜಾಬ್ ವಿಚಾರ ಬಂದಾಗಲೂ ಹೇಲಿದ್ವಿ, ಆರು ಜನ ಶಾಲಾ ವಿದ್ಯಾರ್ಥಿನಿಯರು ಮಾಡಿದ್ದಂತ ವಿಚಾರ ಮೊದಲು ವಿದೇಶಿ ಚಾನೆಲ್ ನಲ್ಲಿ ಬಂತು. ಹಾಗಾದರೆ ಈ ಲಿಂಕ್ ಹೇಗೆ..? ಅವತ್ತು ಹೇಳಿದ್ದೆ ಅದಕ್ಕೆ ವಿದೇಶಿ ಕೈವಾಡವಿದೆ ಅನ್ನೋದನ್ನು ಇವತ್ತು ಪ್ರೂವ್ ಆಗಿದೆ ಎಂದಿದ್ದಾರೆ.