ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜು.19) : ಹೊಸದಾಗಿ ಬರುವ ಆಟೋಗಳಿಗೆ ಪರವಾನಿಗೆ ನಿಲ್ಲಿಸಬೇಕೆಂದು ಹಾಗೂ ಆಟೋ ಚಾಲಕರ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ನೇಹಜೀವಿ ಅಟೋ ಜಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೇರಿದ್ದ “ಸ್ನೇಹಜೀವಿ ಅಟೋ ಜಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಚಿತ್ರದುರ್ಗ ನಗರದಲ್ಲಿ ಅಂದಾಜು 4,000 ಆಟೋರಿಕ್ಷೆಗಳಿದ್ದು, ಈಗ ಇರುವ ಆಟೋರಿಕ್ಷೆಗಳಿಗೆ ದುಡಿಮೆ ಇಲ್ಲದಂತಾಗಿದ್ದು, ಚಾಲಕರು, ದಿನ ನಿತ್ಯ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಹೊಸದಾಗಿ ಆಟೋರಿಕ್ಷೆಗಳಿಗೆ ಪರವಾನಿಗೆ ನೀಡುತ್ತಿರುವುದು, ಹಾಗೂ ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಹೊಸದಾಗಿ ಬರುವ ಆಟೋಗಳಿಗೆ ಪರವಾನಿಗೆ ನಿಲ್ಲಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಆಟೋಸ್ಟಾಂಡ್‍ಗಳನ್ನು ಕೂಡಲೇ ಮಾಡಿಕೊಡುವುದು. ಚಾಲಕರಿಗೆ ವಸತಿಗೃಹಗಳನ್ನು ಕಲ್ಪಿಸಿ ಕೊಡುವುದು. ಹಾಗು ಇತರೆ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.