ಶಿವಮೊಗ್ಗ: ಜಿಲ್ಲೆಯ ವಿಮಾನ ನಿಲ್ದಾಣ ದೇಶದ ಗಮನ ಸೆಳೆದಿದೆ. ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರವಾಗಿಯೇ ಸಾಕಷ್ಟು ಗೊಂದಲವಾಗಿತ್ತು. ಶಿವಮೊಗ್ಗಕ್ಕಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ಕಾರಣಕ್ಕಾಗಿ ಯಡಿಯೂರಪ್ಪ ಅವರ ಹೆಸರನ್ನಿಡಲು ಸೂಚಿಸಲಾಗಿತ್ತು. ಬಳಿಕ ಬಂಗಾರಪ್ಪ ಅವರ ಹೆಸರನ್ನು ಸೂಚಿಸಲಾಗಿತ್ತು. ಎಲ್ಲಾ ವಾದ ವಿವಾದಗಳ ಬಳಿಕ ಯಡಿಯೂರಪ್ಪ ಅವರೇ ಕುವೆಂಪು ಅವರ ಹೆಸರನ್ನು ಸೂಚಿಸಲಾಗಿತ್ತು. ಇದೀಗ ವಿಮಾನ ನಿಲ್ದಾಣ ವಿವಾದಕ್ಕೆ ಗುರಿಯಾಗಿದೆ.
ವಿಮಾನ ನಿಲ್ದಾಣದಲ್ಲಿ ಕನ್ನಡ ಸೂಚನ ಫಲಕವನ್ನೇ ಹಾಕಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್, ಫೇಸ್ಬುಕ್ ಗಳಲ್ಲಿ ಕನ್ನಡಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕನ್ನಡವೇ ಇಲ್ಲದಿರುವ ಫೋಟೋಗಳನ್ನು ಹಂಚಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಎಲ್ರಪ್ಪಾ???? 😡😡😡😡
ಈ ನಿಲ್ದಾಣಕ್ಕೆ ಕುವೆಂಪು ಹೆಸ್ರು ಇಡ್ತೀವಿ ಅಂತೀರಾ. ಆ ಹೆಸರಿಟ್ಟು ಕನ್ನಡ ಇಲ್ದೆ ಅವ್ರಿಗೂ ಅವಮಾನ ಮಾಡೋದಿಕ್ಕಾ??? https://t.co/2xDITHBdcC— ಮಂಸೋರೆ/ManSoRe (@mansore25) February 20, 2023
ನಿರ್ದೇಶಕ ಮಂನ್ಸೋರೆ ಅವರು ಕೂಡ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಕನ್ನಡ ಎಲ್ರಪ್ಪಾ???? 😡😡😡😡
ಈ ನಿಲ್ದಾಣಕ್ಕೆ ಕುವೆಂಪು ಹೆಸ್ರು ಇಡ್ತೀವಿ ಅಂತೀರಾ. ಆ ಹೆಸರಿಟ್ಟು ಕನ್ನಡ ಇಲ್ದೆ ಅವ್ರಿಗೂ ಅವಮಾನ ಮಾಡೋದಿಕ್ಕಾ???” ಎಂದು ಕಿಡಿಕಾರಿದ್ದಾರೆ.