Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದರ್ಶನ್ ಗೆ ಮನೆ ಊಟ, ಹಾಸಿಗೆ ಇಲ್ಲ : ಕೋರ್ಟ್ ನಲ್ಲಿ ಆಗಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಜೈಲೂಟ ದೇಹಕ್ಕೆ ಹಿಡಿಸದೆ ದರ್ಶನ್ ಗೆ ವಾಂತಿ-ಬೇಧಿ ಆಗುತ್ತಿತ್ತಿದೆ ಎಂದು ಅವರ ಪರ ವಕೀಲರು ಮನೆ ಊಟ, ಹಾಸಿಗೆ, ಪುಸ್ತಕವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ದರ್ಶನ್ ಗೆ ಹಿನ್ನಡೆಯಾಗಿದೆ. ಮುಂದಿನ ವಿಚಾರಣೆ ತನಕ ಜೈಲಿನ ಎಲ್ಲಾ ಕೈದಿಗಳಿಗೂ ಸೌಲಭ್ಯ ಹೇಗಿರುತ್ತದೆಯೋ ಅದೇ ಥರ ದರ್ಶನ್ ಅವರಿಗೂ ಸೌಲಭ್ಯವನ್ನು ನೀಡಲಾಗುತ್ತದೆ.

 

ಜೈಲೂಟದಿಂದ ದರ್ಶನ್ ಸಾಕಷ್ಟು ತೂಕ ಕಳೆದುಕೊಳ್ಳುತ್ತಿದ್ದಾರೆ. ಹಾಸಿಗೆ, ಊಟ, ಪುಸ್ತಕ ನೀಡುವಂತೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಇಂದು ಕೋರ್ಟ್ ನಲ್ಲಿ ದರ್ಶನ್ ಪರ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ಜೈಲು ನಿಯಾಮಾವಳಿಗಳಲ್ಲಿ ಮನೆಯ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ ಅವರಿಗೆ ಮನೆ ಊಟದ ಅವಕಾಶ ನೀಡಿಲ್ಲ ಎಂದು ವಾದ ಮಾಡಿದರು.

ಈ ವಾದ ಆಲಿಸಿದ್ದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರು, ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದಿನ ಕೋರ್ಟ್ ತೀರ್ಪುಗಳಿವೆಯೇ..? ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ..? ಜೈಲು ಅಧಿಕಾರಿಗಳಿಗೆ ನೀವೂ ಮನವಿ ಮಾಡಿದ್ದೀರಿ. ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದೇ ಹೈಕೋರ್ಟ್ ಗೆ ಅರ್ಜಿ ಸಲಗಲಿಸಬಹುದೆ..? ಕೈದಿಗಳಿಗೆ ಇರುವ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದೆಲ್ಲವನ್ನು ಕೇಳಿದರು. ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು. ಕಾನೂ‌ನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಛಾಯಾ ಟೈಲರ್ ರಮೇಶ್ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ನಗರದ ಲಕ್ಷ್ಮೀ ಬಜಾರ್‌ನಲ್ಲಿರುವ ಛಾಯಾ ಟೈಲರ್ ಅಂಗಡಿ ಮಾಲೀಕ ರಮೇಶ್ (52) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮ ಹೊಸದುರ್ಗ

ಇಂದಿನಿಂದ ಹಾಸನಾಂಬೆಯ ದರ್ಶನ ಭಾಗ್ಯ : ಕ್ಯೂ ನಿಂತ ಭಕ್ತರು

  ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ದೇವಿ ಹಾಸನಾಂಬೆ. ಇದೀಗ ಮತ್ತೆ ಆ ದಿನ ಬಂದಿದೆ. ಹಾಸನಾಂಬೆಯ ಬಾಗಿಲು ತೆಗೆಯಲಾಗಿದೆ. ನಿನ್ನೆಯೇ ಹಾಸನಾಂಬೆಯ ಬಾಗಿಲು ತೆಗೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾತ್ರಿಯಿಂದಾನೇ

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಛಲವಾದಿ ನಾರಾಯಣಸ್ವಾಮಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ. ಈಗ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ

error: Content is protected !!