ನನ್ನ ವಿರುದ್ಧ ಎಫ್ಐಆರ್ ಆಗಿಲ್ಲ : ನಂದಿನಿ ಉತ್ಪನ್ನದ ಬಗ್ಗೆ ಮಾತನ್ನಾಡಿದ್ದ ವೈದ್ಯೆ ಸ್ಪಷ್ಟನೆ

1 Min Read

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡುತ್ತಾ ಇರುತ್ತಾರೆ ವೈದ್ಯೆ ಶರಣ್ಯಾ. ಅದರಂತೆ ಇತ್ತೀಚೆಗೆ ನಂದಿನಿ ಉತ್ಪನ್ನಗಳ ಬಗ್ಗೆಯೂ ಮಾತನ್ನಾಡಿದ್ದರು. ಆ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬುದನ್ನ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಕೆಎಂಎಫ್, ಶರಣ್ಯಾ ವಿರುದ್ಧ ದೂರನ್ನು ನೀಡಿತ್ತು. ಆ ದೂರಿನ ಆಧಾರದ ಮೇಲೆ ಎಫ್ಐಆರ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಆ ಸುದ್ದಿ ಬಗ್ಗೆ ಶರಣ್ಯಾ ಕ್ಲಾರಿಟಿಯನ್ನ ನೀಡಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕಿರುವ ಡಾ.ಶರಣ್ಯಾ, ನಾನು ಒಂದು ಸಂಸ್ಥೆಯ ವಿರುದ್ಧ ಆರೋಪ ಮಾಡಿದಾಗ ಈ ರೀತಿ ಇದು ವೈರಲ್ ಆಗುತ್ತದೆ, ಪೊಲೀಸ್ ದೂರು ಹೋಗುತ್ತದೆ ಎಂಬ ಅರಿವು ನನಗಿತ್ತು. ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರಿಂದ ನನಗೆ ಫೋನ್ ಕರೆ ಬಂದಿತ್ತು. ನನ್ನ ವಿರುದ್ಧ ಎಫ್ಐಆರ್ ಆಗಿಲ್ಲ. ನನ್ನ ವಿರುದ್ಧ ದೂರು ಹೋಗಿರುವುದು ನಿಜ. ಒಂದು ವೇಳೆ ಎಫ್ಐಆರ್ ಆದರೂ ನಾನು ಹೆದರುವುದಿಲ್ಲ. ನಾನು ಈ ಹೋರಾಟ ಮಾಡುತ್ತಿರುವುದು ಸಾರ್ವಜನಿಕರ ಮಕ್ಕಳ ಆರೋಗ್ಯದ ವಿಚಾರಕ್ಕಾಗಿ, ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ.

ಕಳೆದ ಎರಡು ವರ್ಷಗಳಲ್ಲಿ ನಾನು ನನ್ನ ಮಗನಿಗರ ಔಷಧಿ ಕೊಟ್ಟಿಲ್ಲ. ಮಕ್ಕಳನ್ನು ನಾವೂ ಕೊಡುವ ಆಹಾರ ಪದ್ಧತಿ, ಜೀವನಶೈಲಿಯಿಂದ ಆರೋಗ್ಯವಾಗಿ ಸಾಕಬಹುದು. ಔಷಧಿಗಳನ್ನು ಹೆಚ್ಚೆಚ್ಚು ನೀಡದಷ್ಟೂ ಕರುಳಿನ ಆರೋಗ್ಯ ಹಾಳಾಗುತ್ತದೆ. ಆರೋಗ್ಯಕ್ಕೆ ಆಧಾರಸ್ತಂಭ ನಮ್ಮ ಆಹಾರ. ಎಫ್ಎಸ್ಎಸ್ಐನಿಂದ ಅನುಮೋದನೆ ಸಿಕ್ಕಿದೆ ಅಂತಾರೆ. ಅವರಿಗೆ ಜೀರ್ಣಾಂಗ್ ಆರೋಗ್ಯ ಏನು ಅಂದ್ರೆನೇ ಗೊತ್ತಿಲ್ಲ. ಕರುಳುನ ಆರೋಗ್ಯ ಹೇಗೆ ಹಾಳಾಗುತ್ತದೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ.

Share This Article
Enable Notifications OK No thanks