ಗಾಂಧಿನಗರ: ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ಜೋರು ಸಿದ್ಧತೆ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ಹಬ್ಬಗಳ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಎಲ್ಲಾ ಹಬ್ಬಗಳು ಆರಂಭಗೊಂಡಿದ್ದು, ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲು ಎಲ್ಲಾ ಕಡೆ ಸಿದ್ಧತೆ ನಡೆದಿದೆ. ಹಬ್ಬಕ್ಕಾಗಿ ಹಲವು ರೀತಿಯ ಗಿಫ್ಟ್ ಗಳು ಸಿಗಲಿವೆ. ಆದರೆ ಈ ಮಧ್ಯೆ ಗುಜರಾತ್ ಮುಖ್ಯಮಂತ್ರಿ ಭೊಪೇಂದ್ರ ಪಟೇಲ್ ಜನರಿಗೆ ವಿಶೇಷವಾಗಿ ಗಿಫ್ಟ್ ನೀಡಿದ್ದಾರೆ.
ಅಕ್ಟೋಬರ್ 21ರಿಂದ 27ರ ತನಕ ಈ ಗಿಫ್ಟ್ ಚಾಲ್ತಯಲ್ಲಿರಲಿದೆ. ಸಂಚಾರ ನಿಯಮ ಉಲ್ಲಂಘಿಸಿದರು ಯಾವುದೇ ರೀತಿಯ ದಂಡವನ್ನು ವಿಧಿಸುವುದಿಲ್ಲ. ಏಳು ದಿನಗಳ ಕಾಲ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರು ಯಾವುದೇ ರೀತಿಯ ದಂಡವನ್ನು ವಿಧಿಸದಂತೆ ಸಿಎಂ ಸೂಚಿಸಿದ್ದಾರೆ.
ಬಳಿಕ ಮಾತನಾಡಿದ ಗುಜರಾತ್ ಗೃಹಮಂತ್ರಿ ಹರ್ಷ ಸಂಘವಿ, ಪೊಲೀಸರು ಏಳು ದಿನ ದಂಡ ವಿಧಿಸಲ್ಲ ಎಂದು ಸಾರ್ವಜನಿಕರು ಸಂಚಾರಿ ನಿಯಮವನ್ನು ಉಲ್ಲಂಘಿಸಬೇಡಿ. ಪೊಲೀಸರು ದಂಡ ವಿಧಿಸಲ್ಲ ಎಂದರೆ ನೀವೂ ಸಂಚಾರಿ ನಿಯಮವನ್ನು ಪಾಲಿಸಬಾರದು ಎಂದೇನಿಲ್ಲ. ಆದರೆ ನೀವೂ ತಪ್ಪು ಮಾಡಿದರೂ ದಂಡ ವಿಧಿಸಲ್ಲ. ಜನರು ನಿಯಮಗಳನ್ನು ಪಾಲಿಸಿ ಎಂದು ಕಿವಿ ಮಾತು ಹೇಳಿದ್ದಾರೆ.