ವಿಧಾನಸೌಧಕ್ಕೆ ಮಾಧ್ಯಮದವರಿಗೆ ನೋ ಎಂಟ್ರಿ : ನಿಖಿಲ್ ಕುಮಾರಸ್ವಾಮಿ ಏನಂದ್ರು..?

1 Min Read

ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮದವರನ್ನ ನಿಷೇಧ ಮಾಡಲಾಗಿದೆ. ಸರ್ಕಾರದ ಈ ನಡೆಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ತುರ್ತು ಪರಿಸ್ಥಿತಿಯ ಒಂದು ಭಾಗ ಎಂದಿದ್ದಾರೆ.

ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ದೇಶಾದ್ಯಂತ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಷಣ ಮಾಡುವ ಶ್ರೀ @RahulGandhi ಅವರೇ, ಒಮ್ಮೆ ನಿಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದತ್ತ ನೋಡಿ. ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಯಾವ ‘ಸಂವಿಧಾನ’ದ ನಿಯಮ ಶ್ರೀ @RahulGandhi ಅವರೇ? ಮೊದಲು ಕರ್ನಾಟಕ ಸರ್ಕಾರಕ್ಕೆ ಸಂವಿಧಾನದ ಪಾಠ ಮಾಡಿ. ಮಾಧ್ಯಮಗಳನ್ನು ಪಂಜರದಲ್ಲಿ ಇಡಲು ಹೊರಟಿರುವ ಈ ಕರಾಳ ಸುತ್ತೋಲೆ ಅಪ್ಪಟ “ತುರ್ತು ಪರಿಸ್ಥಿತಿ”ಯ ಮುಂದುವರಿದ ಭಾಗ ಎಂದಿದ್ದಾರೆ.

ಪ್ರಜಾಪ್ರಭುತ್ವದ 4ನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸರ್ಕಾರವೇ ಈಗ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆ. ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮತ್ತೆ ಮುಂದಾಗಿದೆ. ಭದ್ರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಧ್ಯಮಗಳಿಗೆ ಹೊಸ ಲಕ್ಷ್ಮಣ ರೇಖೆ ಎಳೆದಿದೆ. ಪದೇ ಪದೇ ವಿಧಾನಸೌಧದಲ್ಲಿ ಭದ್ರತೆಯ ಲೋಪ ಕಂಡು ಬರ್ತಿದೆ. ಇದನ್ನ ಮಾಧ್ಯಮಗಳು ತೋರಿಸುತ್ತಿರೋದೆ ದೊಡ್ಡ ಅಪರಾಧವಾಗಿದೆ. ಕಳೆದ ವಾರ ಸಿಬ್ಬಂದಿ ಮತ್ತು ಆಡಳಿತ ಸುಧಾಕರಣೆ ಇಲಾಖೆ ಸಿಬ್ಬಂದಿಯಿಂದಲೇ 300 ಗ್ರಾಂ ಚಿನ್ನದ ಸರ ಸಚಿವರ ಕೊಠಡಿಯಿಂದ ಕಳ್ಳತನ ಆಗಿತ್ತು. ಈಗ ತನ್ನ ಲೋಪದೋಷಗಳನ್ನ ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ನಿರ್ಬಂಧ ಅಸ್ತ್ರವನ್ನ ಡಿಪಿಎಆರ್ ಬಳಕೆ ಮಾಡಿದೆ. ಡಿಪಿಎಆರ್ ತಾಳಕ್ಕೆ ತಕ್ಕಂತೆ ವಾರ್ತಾ ಇಲಾಖೆ ಕುಣಿಯಲು ಹೊರಟಿದೆ.

Share This Article
Enable Notifications OK No thanks