ಬೆಂಗಳೂರು: ಮುಂದಿನ ಸಿಎಂ ಮುರುಗೇಶ್ ನಿರಾಣಿಯಾಗಲಿದ್ದಾರೆ ಎಂದು ಈ ಇತ್ತೀಚೆಗಷ್ಟೇ ಈಶ್ವರಪ್ಪ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್ ಅಶೋಕ್, ತಿರುಕನ ಕನಸು ಕಾಣೋದು ಬೇಡ ಎಂದು ಬುದ್ಧಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ನಾಯಕ ಮೋದಿ, ಅಮಿತ್ ಶಾ ಅವರು ತೀರ್ಮಾನದಂತೆ ಸಿಎಂ ಆಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಸಂಕಷ್ಟ ಸಮಯದಲ್ಲು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಬೊಮ್ಮಾಯಿ ಅವರಿಗೆ ಕಾಮನ್ ಸಿಎಂ ಅಂತ ಎಲ್ಲರೂ ಕರೀತಾರೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಮುರುಗೇಶ್ ನಿರಾಣಿ ಬಗ್ಗೆ ಈಶ್ವರಪ್ಪ ತಮಾಷೆಯಾಗಿ ಹೇಳಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಮಳೆಯಿಂದಾದ ಬೆಳೆ ನಾಶದ ಬಗ್ಗೆ ಮಾತನಾಡಿದ್ದು, ಈಗಾಗಲೇ ರಾಜ್ಯ ಸರ್ಕಾರ ಬೆಳೆ ಪರಿಹಾರ ಕೊಡುವ ಕೆಲಸ ಮಾಡಲಾಗಿದೆ. ಎಲ್ಲಾ ಡಿಸಿಗಳಿಗೆ ಗಡುವು ನೀಡಲಾಗಿದೆ. ರೈತರ ಬೆಳೆ ಹಾನಿ ಗುರುತು ಮಾಡಬೇಕು. ಈ ಹಿಂದೆ ನೀಡಿದ ರೀತಿಯಲ್ಲಿ ಪರಿಹಾರ ನೀಡಲ್ಲ . ವರದಿ ಬಂದ ಕೂಡಲೇ ಪರಿಹಾರ ಕೊಡಲು ಸೂಚನೆ ನೀಡಿದ್ದೇನೆ. ಈವರೆಗೂ 3 ಲಕ್ಷ ರೈತರಿಗೆ 276.57 ಕೋಟಿ ಪರಿಹಾರ ನೇರವಾಗಿ ಪಾವತಿ ಮಾಡಲಾಗಿದೆ ಎಂದಿದ್ದಾರೆ.