ತಮಿಳು ನಟ ಕಮಲ್ ಹಾಸನ್ ತಮ್ಮ ಸಿನಿಮಾದ ಪ್ರಮೋಷನ್ ಮಾಡುವಾಗ, ಕನ್ನಡದ ಬಗ್ಗೆ ಮಾತನಾಡಿದ್ದರು. ಕನ್ನಡದ ಹುಟ್ಟಿನ ಬಗ್ಗೆಯೇ ಮಾತನಾಡಿದ್ದರು. ತಮಿಳು ಮೊದಲು ಆಮೇಲೆ ಕನ್ನಡ ಎಂದಿದ್ದರು. ಇದು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಕ್ಷಮೆಯನ್ನ ಕೇಳಲೇಬೇಕು ಎಂದು ಕನ್ನಡ ಪರ ಸಂಘಟನೆ ಕೂಡ ಪಟ್ಟು ಹಿಡಿದಿದ್ದಾರೆ. ಆದರೂ ಕ್ಷಮೆ ಕೇಳುವುದಕ್ಕೆ ಕಮಲ್ ಹಾಸನ್ ಮಾತ್ರ ಒಪ್ಪುತ್ತಿಲ್ಲ. ಕಳೆದ ಎರಡು ದಿನದಿಂದ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಕನ್ನಡಿಗರ ಒತ್ತಡದ ನಡುವೆ ಕಮಲ್ ಹಾಸನ್ ಕ್ಷಮೆ ಕೇಳುವುದಕ್ಕೆ ರೆಡಿ ಇಲ್ಲ. ಈ ಬಗ್ಗೆ ಇಂದು ಕೂಡ ಮಾತನಾಡಿದ್ದು, ನಾನು ಕ್ಷಮೆ ಕೇಳಲ್ಲ. ನಾನು ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ. ಇದು ಪ್ರಜಾಪ್ರಭುತ್ವ, ನಾನು ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾನು ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳವನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ನಾನು ಏನಾದ್ರು ತಪ್ಪು ಮಾಡಿದ್ರೆ ಕ್ಷಮೆ ಕೇಳುತ್ತೇನೆ. ನಾನು ತಪ್ಪೇ ಮಾಡಿಲ್ಲ. ಬೆದರಿಕೆಗಳಿಂದ ನಾನು ತಬ್ಬಿಬ್ಬು ಆಗಿಲ್ಲ ಎಂದಿದ್ದಾರೆ.
ಕಮಲ್ ಹಾಸನ್ ಕನ್ನಡ ಬಗ್ಗೆ ನೀಡಿದ ಹೇಳಿಕೆಯನ್ನ ಸ್ಟಾರ್ ನಟರೇ ವಿರೋಧಿಸಿದ್ದಾರೆ. ಹಾಗೇ ಕಮಲ್ ಹಾಸನ್ ಹೇಳಿಕೆಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಗಳೂರಿಗೆ ಬಂದು ತಮ್ಮ ಸಿನಿಮಾವನ್ನು ಪ್ರಮೋಷನ್ ಮಾಡುವ ಕಮಲ್ ಹಾಸನ್ ಗೆ ಕನ್ನಡದ ಬಗ್ಗೆ ಇರಿಹಾಸ ಗೊತ್ತಿಲ್ವಾ ಎಂಬ ಪ್ರಶ್ನೆ ಹಲವರದ್ದು. ಕ್ಷಮೆ ಕೇಳುವುದಕ್ಕೆ ಎಷ್ಟೇ ಆಗ್ರಹ ಮಾಡಿದ್ರು ಕ್ಷಮೆ ಕೇಳೋದಕ್ಕೆ ಕಮಲ್ ಹಾಸನ್ ಒಪ್ಪುತ್ತಾ ಇಲ್ಲ.


