ಬೆಂಗಳೂರು: ಪಕ್ಷದ ಎಐಸಿಸಿ ಅಧ್ಯಕ್ಷರಾಗಿ ಸೋನೀಯಾಗಾಂಧಿಯವರೇ ಮುಂದುವರೆಯಬೇಕೆಂದು ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಂಡಿದ್ದೇವೆ. ಮುಂದೆ ಏನೇ ಬದಲಾವಣೆ ಮಾಡಬೇಕಾದರೂ ಎಲ್ಲಾ ಅಧಿಕಾರ ಅವರಿಗೆ ಇರುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದೆ. ಈ ಸಂಬಂಧ ಶಿಬಿರವೊಂದನ್ನ ಮಾಡ್ಬೇಕು ಅಂತ ಸೋನಿಯಾ ಗಾಂಧಿ ಅವ್ರು ಹೇಳಿದ್ದಾರೆ. ಅದಕ್ಕೆ ನಾನು ಇದನ್ನ ಕರ್ನಾಟಕದಲ್ಲಿ ಮಾಡಿದ್ರೆ ತುಂಬಾ ಅನುಕೂಲವಾಗುತ್ತೆ ಅಂತ ನಾನು ಮನವಿ ಮಾಡಿದ್ದೇನೆ. ರಾಷ್ಟ್ರಮಟ್ಟದಲ್ಲಿ ಮುಂದಿನ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಜಾತ್ಯಾತೀತ ಪಕ್ಷಗಳು ಒಗ್ಗಟ್ಟಾಗಿ ಹೋಗಬೃಕೆಂಬುದನ್ನು ಚಿಂತನೆ ಮಾಡಿದ್ದೇವೆ. ಇದಕ್ಕೆ ಬಿಜೆಪಿ ವಿರುದ್ಧವಾದ ಪಾರ್ಟಿಗಳು ಒಟ್ಟಾಗಬೇಕಾಗಿದೆ.
ಪಂಚರಾಜ್ಯ ಚುನಾವಣೆ ರಿಸಲ್ಟ್ ಬಂದ ಮೇಲೆ ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಹೇಗೆ ಹೋಗಬೇಕು ಎಂಬುದನ್ನ ನಿರ್ಧರಿಸಿದ್ದೇವೆ. ಗೋವಾದಲ್ಲಿ ಮಿತ್ರ ಪಕ್ಷಗಳು ಸ್ಪರ್ಧೆ ನಡೆಸಿದ್ದರಿಂದ ಅಲ್ಲಿ ಬಿಜೆಪಿ ಬಂತು. ಇಲ್ಲಿ ಬಿಜೆಪಿಗೆ ವಿರುದ್ಧವಾಗಿರುವ ಪಕ್ಷಗಳ ಜೊತೆ ಮಿತೃತ್ವ ಬೆಳೆಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಬೇಕಾಗುತ್ತದೆ.
ಸ್ವಂತ ಬಲ ನಮ್ಮದು ಮೇಜರ್ ಆಗಿರುತ್ತೆ. ಕೆಲವು ಪಕ್ಷಗಳು ಗೆಲ್ಲೋದು ಇಲ್ಲ. ಆದ್ದರಿಂದ ನಾವೂ ಒಟ್ಟಿಗೆ ಹೋಗುವುದರಿಂದ ಬಿಜೆಪಿಯನ್ನ ಸೋಲಿಸಬಹುದು. ಕೆಲವು ಕೆಲವು ರಾಜ್ಯದಲ್ಲಿ ಒಂದೊಂದು ರೀತಿ ಆಗುತ್ತೆ. ಆದ್ರೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ. ಲೋಕಸಭಾ ಚುನಾವಣೆಯಲ್ಲೆರ ಇದಕ್ಕೊಂದು ಉದಾಹರಣೆ ಸಿಕ್ಕಿದೆ. ಹೀಗಾಗಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕಿತ್ತಾಡಲ್ಲ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಸಂದರ್ಭ ಉದ್ಭವಿಸಲ್ಲ ಎಂದಿದ್ದಾರೆ.