ಬಿಜೆಪಿ ಸರ್ಕಾರದಲ್ಲಿ ಯಾವ ಅಡ್ಜೆಸ್ಟ್ ಮೆಂಟ್ ಇಲ್ಲ : ಶಾಸಕ ರೇಣುಕಾಚಾರ್ಯ

suddionenews
3 Min Read

ಬೆಂಗಳೂರು: ನಮಗೆ ಮಠಾಧೀಶರ ಬಗ್ಗೆ, ಖಾವಿಧಾರಿಗಳ ಬಗ್ಗೆ ಗೌರವ ಇದೆ. ಆದರೆ ಯಾವ ಮಾಠಾಧೀಶರು ಮಾತಾಡಿದ್ದಾರೆ ಅವರಿಗೆ ತಲೆ ಸರಿ ಇರುವ ತರ ಕಾಣಲ್ಲ.ಒಬ್ಬ ಖಾವಿಧಾರಿಯಾಗಿ, ಕಾಂಗ್ರೆಸ್ ಏಜೆಂಟರ ರೀತಿ ಮಾತಾಡುತ್ತಾರೆ ಎಂದರೆ, ನಿಮಗೆ ಕಾಂಗ್ರೆಸ್ ಮುಖಂಡರ ಪ್ರೇರಿತ ಹೇಳಿಕೆಯನ್ನು ಕೊಟ್ಟಿದ್ದೀರಿ. ಮಠಾಧೀಶರಾದ ಮೇಲೆ ಧರ್ಮವನ್ನು ಬೋಧನೆ ಮಾಡಬೇಕು. ನಮ್ಮ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಮಠ ಮಾನ್ಯರಿಗೆ ಅನುದಾನ ಬಿಡುಗಡೆ ಮಾಡ್ತೀವಿ ಅಂದರೆ ಮಠದಲ್ಲಿರುವ ಸಂಸಾರಿಕರಲ್ಲ, ಸನ್ಯಾಸಿಗಳು ಧರ್ಮವನ್ನು, ಅನ್ನ ದಾಸೋಹ, ಶಿಕ್ಷಣ ದಾಸೋಹ ಮುಖಾಂತರ ಮನುಷ್ಯನ ಬದುಕಿಗೆ ಒಳ್ಳೆಯದ್ದನ್ನೆ ಬಯಸುವವರು.

ದಿಂಗಾಲೇಶ್ವರ ಸ್ವಾಮೀಜಿಯ ಹೇಳಿಕೆಯನ್ನು ನಿನ್ನೆ ಬಹುತೇಕ ಮಠಾಧೀಶರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸ್ವಾಮೀಜಿಗಳೇ ನಿಮಗೆ ಯಾರಾದರೂ ಕಮೀಷನ್ ಕೇಳಿದ್ದರೆ ಮುಖ್ಯಮಂತ್ರಿಗಳು ನಿಮ್ಮ ಜಿಲ್ಲೆಯವರೇ ಅವರ ಬಳಿ ಚರ್ಚೆ ಮಾಡಬೇಕಾಗಿತ್ತು. ಎಲ್ಲೋ ಒಂದು ಕಡೆ ಕಾಂಗ್ರೆಸ್ ನ ಏಜೆಂಟ್ ಆಗಿ ಹೇಳಿಕೆ ಕೊಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇನ್ನು ಕಮಿಷನ್ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ ಅವರು, ಬಸನಗೌಡ ಪಾಟೀಲ್ ನನ್ನ ಮಿತ್ರರು. ಅವರ ಜೊತೆ ನಾನು ಮಾತಾಡ್ತೀನಿ. ಬಿಜೆಪಿಯಲ್ಲಿ ಯಾವ ಅಡ್ಜೆಸ್ಟ್ಮೆಂಟು ಇಲ್ಲ ಏನಿಲ್ಲ. ಯತ್ನಾಳ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನೋದು ಗೊತ್ತಿಲ್ಲ. ನೀವೂ ಯತ್ನಾಳ್ ಅವರನ್ನೆ ಕೇಳಿ. ಯತ್ನಾಳ್ ಅವರು ನಮ್ಮ ಪಕ್ಷದ ಹಿರಿಯ ಶಾಸಕರು. ಸಚಿವರಾಗಿದ್ದಂತವರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಮಾಹಿತಿ ಇಲ್ಲ ಎಂದಿದ್ದಾರೆ.

40% ಕಮಿಷನ್ ಎಷ್ಟು ಹಾಸ್ಯಾಸ್ಪದ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಇವರು 40% ಕಮಿಷನ್ ಬಗ್ಗೆ ಹಬ್ಬಿಸಿದ್ದಾರೆ ಕಾಂಗ್ರೆಸ್ ನಾಯಕರು. ಇವತ್ತು ನಮ್ಮ ಸರ್ಕಾರ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೆ ನೀವೇಳ್ತಾ ಇರೋದು 40% ರಾಯಲ್ಟಿ, ಜಿಎಸ್ಟಿ ಎಲ್ಲಾ ಸೇರಿದರೆ 70% ಆಗುತ್ತೆ. ಇನ್ನುಳಿದ 30%ಗೆ ಯಾತಾದ್ರೂ ಕೆಲಸ ಮಾಡುತ್ತಾರಾ..? ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *