ಪರ್ಸಂಟೇಜ್ ಆರೋಪವಿಲ್ಲ, ಭ್ರಷ್ಟಾಚಾರ ಆರೋಪವಿಲ್ಲ ನಾನು ಮುಖ್ಯಮಂತ್ರಿ ಆಗಬಾರದಾ..? : ಯತ್ನಾಳ್ ಪ್ರಶ್ನೆ

suddionenews
1 Min Read

ವಿಜಯಪುರ: ಗುತ್ತಿಗೆದಾರರ ಸಂಘ ಯಾರದ್ದು ಐತೆ ಅಂತ ನೋಡಬೇಕಿದೆ. ಅದು ನಿಜವಾಗಿಯೂ ಗುತ್ತಿಗೆದಾರರ ಸಂಘ ಇದೆಯೋ ಅಥವಾ ಕಾಂಗ್ರೆಸ್ ಪ್ರೇರಿತ ಸಂಘ ಇದೆಯೋ ನೋಡಬೇಕಿದೆ. ಅವರ ಚಟುವಟಿಕೆಯನ್ನು ನಾವೂ ತೆಗೆಯುತ್ತಾ ಇದ್ದೀವಿ. ಅವರು ಕಾಂಗ್ರೆಸ್ ಸದಸ್ಯರಿದ್ದಾರೋ, ಏನು ಎಂಬುದನ್ನು ನೋಡುತ್ತಿದ್ದೇವೆ. ಯಾವುದೇ ಸಂಘಟನೆಯ ಅಗಲಿ ಸರ್ಕಾರದ ವಿರುದ್ಧ ಮಾತನಾಡಬಾರದು. ಏನೇ ಇದ್ದರು ಆ ಆರೋಪವನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸುವ ಹಕ್ಕಿದೆ. ಅದನ್ನು ಬಿಟ್ಟು ಕಾಂಗ್ರೆಸ್ ನ ಏಜೆಂಟ್ ರೀತಿ ಮಾತನಾಡಬಾರದು. ಆ ರೀತಿ ಮಾತನಾಡಿದರೆ ಅವರು ಕಾಂಗ್ರೆಸ್ ಏಜೆಂಟ್ ಇರಬೇಕೆಂಬ ಅನುಮಾನ ಬರುತ್ತೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ನಮಗೂ ಧಮ್ಕಿ ಹಾಕಿದ್ದರು. ನನಗೂ ವಿಧಾಸಭೆಯೊಳಗೆ ಧಮ್ಕಿ ಹಾಕಿದ್ದರು. ಈ ಧಮ್ಕಿ ಹಾಕೋರು, ಗೂಂಡಾಗಳಂತೆ ಆಡೋರನ್ನು ಕಳೆದ ಮೂರು ವರ್ಷದಿಂದ ನೋಡುತ್ತಾ ಇದ್ದೀವಿ. ಉತ್ತರಪ್ರದೇಶದ ಗುಂಡಾಗಳು ಅಂತ ಹೇಗೆ ಆಗಿದೆ. ಅದೇ ಥರ ಕರ್ನಾಟಕದಲ್ಲೂ ಬುಲ್ಡೋಜರ್ ಕೂಡ ಬರುತ್ತೆ, ಗೂಂಡಾಗಳು ಹುಟ್ಟಿಕೊಳ್ಳುತ್ತಾರೆ ಎಂದಿದ್ದಾರೆ.

ಎಲ್ಲದಕ್ಕೂ ನಿಲ್ಲುವವರಲ್ಲ. ಎಲ್ಲಿ ಕರೆದಿರುತ್ತಾರೋ ಅಲ್ಲಿಗೆ ಹೋಗ್ತೀವಿ. ಯತ್ನಾಳ್ ಬಿಟ್ಟರೆ ಜಿಲ್ಲೆಯಲ್ಲಿ ಏನು ಆಗಲ್ಲ ಅದನ್ನು ತಿಳಿದುಕೊಳ್ಳಬೇಕು. ಯತ್ನಾಳ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರೆರ ನನ್ನ ವಿರುದ್ಧ ಏನೇ ಮಾಡಿದರು ಅವರು ಮುಂದಿನ ಸಲ ಔಟ್ ಆಗ್ತಾರೆ. ನನ್ನ ಬಿಟ್ಟು ಮುಂದುವರೆದರೆ ಅವರಿಗೆ ಭವಿಷ್ಯವಿಲ್ಲ. ನಾನು ಮುಖ್ಯಮಂತ್ರಿ ಆಗಬಾರದಾ..? ಎಲ್ಲಾ ಅರ್ಹತೆ ನನಗಿದೆ. ಭ್ರಷ್ಟಾಚಾರ ಆರೋಪವಿಲ್ಲ, ಜಾತಿ ಆರೋಪವಿಲ್ಲ, ಹಗರಣ ಮಾಡಿಲ್ಲ, ಗಣಿಗಾರಿಕೆ ಹಗರಣ ಇಲ್ಲ, ಪರ್ಸಂಟೇಜ್ ಆರೋಪವಿಲ್ಲ ಯಾಕೆ ಮುಖ್ಯಮಂತ್ರಿಯಾಗಬಾರದು. ಮೋದಿಯವರು ಮನಸ್ಸು ಮಾಡಿದರೆ ನನಗೂ‌ ಮುಖ್ಯಮಂತ್ರಿಯಾಗುವ ಅದೃಷ್ಟವಿದೆ. ಹಾಗೇ ಒಂದೇ ವರ್ಷದಲ್ಲಿ 350 ಸೀಟು ತರುವ ತಾಕತ್ತು ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *