ಒಂದು ಕಡೆ ಡೇಂಘ್ಯೂ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜನ ಜ್ವರ, ನೆಗಡಿ, ಕೆಮ್ಮಿನಂತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರ ಮಧ್ಯೆ ಈಗ ನಿಫಾ ವೈರಸ್ ಆತಂಕವನ್ನು ಹೆಚ್ಚಿಸಿದೆ. ಕೇರಳದಲ್ಲಿ ಈಗಾಗಲೇ ನಿಫಾ ವೈರಸ್ ಜಾಸ್ತಿಯಾಗಿದ್ದು, ಇಬ್ಬರನ್ನು ಬಲಿ ಕೂಡ ಪಡೆದುಕೊಂಡಿದೆ.
ನಿಫಾ ವೈರಸ್ ನಿಂದಾಗಿ ಕಳೆದ ವರ್ಷ ಸಾಕಷ್ಟು ಜನ ಸಂಕಟ ಅನುಭವಿಸಿದ್ದರು, ಸಾವು – ನೋವು ಕಂಡಿದ್ದರು. ಬಾವಾಲಿಗಳಿಂದ ಹುಟ್ಟಿಕೊಳ್ಳುವ ಈ ನಿಫಾ ವೈರಸ್ ಈಗ ಕೇರಳದಲ್ಲಿ ಆತಂಕ ಮೂಡಿಸಿದೆ. ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಆಗಸ್ಟ್ 30 ಹಾಗೂ ಸೆಪ್ಟೆಂಬರ್ 11ರಂದು ಇದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ನಿಫಾ ವೈರಸ್ ನಿಂದಾಗಿಯೇ ಇಬ್ಬರು ಸಾವನ್ನಪ್ಪಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಕೇರಳದಲ್ಲಿ ಈ ಮೊದಲು ಅಂದ್ರೆ 2018 ರಲ್ಲಿ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ನಿಫಾ ವೈರಸ್ ಕಾಣಿಸಕೊಂಡಿದೆ.
ಇನ್ನು ಕೇರಳ ರಾಜ್ಯದಲ್ಲಿ ಈ ರೀತಿಯಾದ ವೈರಸ್ ಕಾಣಿಸಿಕೊಂಡ ಪರಿಣಾಮ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಿಫಾ ವೈರಸ್ ಬಗ್ಗೆ ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ. ಏರ್ಪೋರ್ಟ್ ನಲ್ಲಿಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅದರಲ್ಲೂ ಬೇರೆ ಬೇರೆ ರಾಜ್ಯಗಳಿಂದ ಬರುವವರು, ಅನಾರೋಗ್ಯಕ್ಕೆ ಈಡಾಡದವರ ಮೇಲೆ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದು, ತಪಾಸಣೆ ನಡೆಸುತ್ತಿದ್ದಾರೆ. ಕೇರಳದಲ್ಲಂತು ಜನರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ.
ಈ ಹಿಂದೊಮ್ಮೆ ನಿಫಾ ವೈರಸ್ ಕಾಣಿಸಿಕೊಂಡಾಗ ಕಂಡ ಕಂಡಲ್ಲಿ ಬಾವಾಲಿಗಳ ಸಾಯಿಸುವ ನಿರ್ಧಾರಕ್ಕೆ ಜನ ಬಂದಿದ್ದರು. ಬಾವಾಲಿಗಳಿಂದಾನೇ ಈ ವೈರಸ್ ಹರಡುವುದು ಎಂದಾಗ ಸಾಕಷ್ಟು ಬಾವಾಲಿಗಳನ್ನು ಕೊಂದಿದ್ದ ಘಟನೆಯೂ ನಡೆದಿತ್ತು.