ಚುನಾವಣೆಗೆ 3 ವರ್ಷ ಇರುವಾಗಲೇ ಕ್ಷೇತ್ರ ಘೋಷಿಸಿದ ನಿಖಿಲ್ ಕುಮಾರಸ್ವಾಮಿ..!

1 Min Read

ರಾಮನಗರ: ನಿಖಿಲ್ ಕುಮಾರಸ್ವಾಮಿಗೆ ಅದ್ಯಾಕೋ ಏನೋ ಮೂರು ಚುನಾವಣೆಗಳು ಕೈಹಿಡಿಯಲಿಲ್ಲ. ಸೋಲಿನ ಸಮಯದಲ್ಲಿ ನಿಖಿಲ್ ಅವರು ಸಿನಿಮಾ ಹಾಗೂ ರಾಜಕೀಯ ಎರಡು ಕಡೆಯಲ್ಲೂ ಗಮನ ಹರಿಸಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಕೂಡ ಬಿಗ್ ಬಜೆಟ್ ಸಿನಿಮಾವನ್ನ ಅಮೌನ್ಸ್ ಮಾಡಿದ್ದರು. ಆದರೆ ಈಗ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿಯೇ ಮುಳುಗಿ ಹೋಗಿದ್ದಾರೆ. ಕಾರ್ಯಕರ್ತರ ಸಭೆಗಳನ್ನ ನಡೆಸ್ತಾ ಇರ್ತಾರೆ, ತಮ್ಮ ಕ್ಷೇತ್ರದ ಜನರ ಬಳಿಗೆ ಹೋಗ್ತಾ ಇರ್ತಾರೆ. ಇದರ ನಡುವೆ ಚುನಾವಣೆಗೆ ಇನ್ನು ಬಹಳಷ್ಟು ಸಮಯ ಇರುವಾಗಲೇ ತಮ್ಮ ಕ್ಷೇತ್ರವನ್ನ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು..? ಯಾವ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಚುನಾವಣೆಗೆ ನಿಲ್ಲುವ ಸಂದರ್ಭದ ಬಂದ್ರೆ ರಾಮನಗರದಲ್ಲಿಯೇ ನನ್ನ ಮುಂದಿನ ಸ್ಪರ್ಧೆ. ಯಾವುದೆರ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ. ಇದು ನಮ್ಮ ಸ್ವ ಕ್ಷೇತ್ರ. ನೀವೂ ಬೆಳೆಸಿದ ಮನೆ ಮಕ್ಕಳು ನಾವೂ. ನಮ್ಮನ್ನ ಪ್ರೀತಿಯಿಂದ ಬೆಳೆಸಿದ್ದೀರಿ, ಅರಸಿದ್ದೀರಿ. ಹೀಗಾಗಿ ಯಾವುದೆರ ಕಾರಣಕ್ಕೂ ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿ ಅವರಿಗೆ ದೆಹಲಿಯಲ್ಲಿ ಕೆಲಸವಿಲ್ಲ. ಅದಕ್ಕೆ ರಾಜ್ಯಕ್ಕೆ ಬರ್ತಾರೆ ಎಂಬ ಡಿಕೆ ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, ಹೌದಪ್ಪ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸಿದ್ದು ಡಿಕೆ ಸುರೇಶ್ ಅವರ ಅಥವಾ ಅವರ ಸಹೋದರ ಶಿವಕುಮಾರ್ ಅವರ..? ಮಾವಿನ ಹಣ್ಣಿನ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಕುಮಾರಣ್ಣ ನೆರವಿಗೆ ಬಂದಿದ್ದಾರೆ. ಕುಮಾರಣ್ಣ ಪತ್ರ ಬರೆದಿದ್ದಕ್ಕೆ ಕೇಂದ್ರ ಕೃಷಿ ಸಚುವರು ಸ್ಪಂದಿಸಿದ್ದಾರೆ ಎಂದು ಡಿಕೆ ಬ್ರದರ್ಸ್ ಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks