ಮಂಡ್ಯ: ಪರಿಷತ್ ಚುನಾವಣೆ ಸದ್ಯ ಗರಿಗೆದರಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ತಮ್ಮ ಅಭ್ಯರ್ಥಿ ಪರ ಜೈಕಾರ ಕೂಗಲು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಸೋಲಿನ ಬಗ್ಗೆ ನೆನೆದು ಬೇಸರ ಮಾಡಿಕೊಂಡಿದ್ದಾರೆ.
ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದ ನಿಖಿಲ್, ಇದೀಗ ರಾಜಕೀಯ ವಿಚಾರದಲ್ಲೂ ಅದನ್ನ ನೆನೆದಿದ್ದಾರೆ. ಸಿನಿಮಾದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದೆ. ಆದ್ರೆ ರಾಜಕೀಯದಲ್ಲೂ ಅಭಿಮನ್ಯು ಪಾತ್ರ ಮಾಡಿಸಿಬಿಟ್ಟಿದ್ದಾರೆ ಎಂದಿದ್ದಾರೆ. ರೈತ ಸಂಘ, ಕಾಂಗ್ರೆಸ್, ಬಿಜೆಪಿ ಎಲ್ಲಾ ಸೇರಿ ಸಂಚು ಮಾಡಿಯೇ ನನ್ನನ್ನು ಸೋಲಿಸಿದರು ಎಂದು ಮತ್ತೆ ತಮ್ಮ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ನನಗೆ ರಾಜಕೀಯದಲ್ಲಿ ತಂದೆಯ ಹೆಸರಿನ ಮೇಲೆ ಸ್ಥಾನ ಮಾನ ಬೇಕೆಂಬ ಹುಚ್ಚು ನನಗಿಲ್ಲ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನಮ್ಮ ಪಕ್ಷದ ಶಾಸಕರು, ಸಚಿವರು, ಕಾರ್ಯಕರ್ತರ ಮಾತಿನ ಮೇರೆಗೆ ನಾನು ಚುನಾವಣೆಗೆ ನಿಂತಿದ್ದೆ. ಆದ್ರೆ ಆ ಸಮಯದಲ್ಲಿ ಸೋಲಾಗಿದೆ. ಈಗ ಮತ್ತೆ ಗೆಲ್ಲುವ ಅವಕಾಶ ಬಂದಿದೆ. ನಮ್ಮ ಪಕ್ಷದ ಅಪ್ಪಾಜಿ ಗೌಡ ಅವರನ್ನ ಗೆಲ್ಲಿಸುವ ಹೊಣೆ ನನ್ನ ಮೇಲಿದೆ. ಅಪ್ಪಾಜಿ ಗೌಡರಂತ ಒಳ್ಳೆಯ ಅಭ್ಯರ್ಥಿಯನ್ನ ಈ ಬಾರಿ ಗೆಲ್ಲಿಸೋಣಾ. ನನಗೆ ಹೇಗೂ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿ ಅಭ್ಯಾಸವಿದೆ. ರಾಜಕೀಯದಲ್ಲೂ ಅದನ್ನೇ ಮಾಡ್ತೇನೆ ಎಂದಿದ್ದಾರೆ.