Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿಖಿಲ್ ಒಳ್ಳೆಯ ಸಿನಿಮಾ ನಟ..ಅವರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ.. ಆದ್ರೆ : ಶಿವರಾಮೇಗೌಡರ ಬೇಸರವೇನು..?

Facebook
Twitter
Telegram
WhatsApp

ಮಂಡ್ಯ : ಜೆಡಿಎಸ್ ನಲ್ಲಿರುವ ಕೆಲವು ನಾಯಕರ ವಿರುದ್ಧ ಎಲ್ ಆರ್ ಶಿವರಾಮೇಗೌಡ ಅವರು ಆಕ್ರೋಶಗೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯಗೆ ಕರೆತಂದಿದ್ದು, ಯಾರು..? ಯಾಕೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನ್ನನ್ನು ಮಟ್ಟ ಹಾಕುವುದಕ್ಕೆ ನಿಖಿಲ್ ಅವರನ್ನ ಕರೆತಂದು ಮಂಡ್ಯದಲ್ಲಿ ಬಲಿ ಕೊಟ್ಟಿದ್ದಾರೆ ಎಂದೆಲ್ಲಾ ಹೇಳಿದ್ದಾರೆ.

ಮಂಡ್ಯದ ನಾಯಕರಿಗೆ ನನ್ನನ್ನು ತೆಗೆಯಬೇಕು ಎಂಬುದು ಮೂಲ ಉದ್ದೇಶವಾಗಿತ್ತು. ಅದಕ್ಕೆ ಕೆಲ ಶಾಸಕರು ಏನೇನೋ ಕಥೆ ಕಟ್ಟಿದರು. ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಅವರಿಗೆ ನಿಖಿಲ್ ಅವರನ್ನು ಮಂಡ್ಯಗೆ ಕರೆತರುವ ಉದ್ದೇಶವೇ ಇರಲಿಲ್ಲ. ಆದರೆ ಶಾಸಕರು 75 ಸಾವಿರ ಮತ ಹಾಕಿಸುವುದು ನನ್ನ ಜವಬ್ದಾರಿ ಅಂತ ಹೇಳಿದ್ದರು. ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿ, ನಿಖಿಲ್ ಅವರನ್ನು ನಿಲ್ಲಿಸಿದ್ದರು. ಆದರೆ ಆಮೇಲೆ ಏನಾಯ್ತು.

ನಿಖಿಲ್ ಅವರಿಗೇನೆ ಚುನಾವಣೆಯಲ್ಲಿ ನಿಲ್ಲಲು ಆಸಕ್ತಿ ಇರಲಿಲ್ಲ. ಅವರು ಒಳ್ಳೆಯ ಸಿನಿಮಾ ನಟ. ಇನ್ನು ಅವಕಾಶಗಳು ತುಂಬಾ ಇತ್ತು. ಆದ್ರೆ ಮಂಡ್ಯದ ಶಾಸಕರ ಮಾತು ಕೇಳಿ ಕುಮಾರಸ್ವಾಮಿ ಅವರು ನಿಲ್ಲಿಸಿದರು ಎಂದು ಶಿವರಾಮೇಗೌಡ ಅವರು ಬೇಸರ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ಚುನಾವಣಾ ಕರ್ತವ್ಯ ನಿರತ ಎಪಿಆರ್ ಓ ಶಿಕ್ಷಕಿ ಸಾವು

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್.26 : ಲೋಕಸಭಾ ಚುನಾವಣೆ ಕರ್ತವ್ಯ ವೇಳೆ ಹೃದಯಘಾತದಿಂದ  ಕರ್ತವ್ಯ ನಿರತ  ಎಪಿಆರ್ ಓ  ಶಿಕ್ಷಕಿ ಯಶೋದಮ್ಮ(55)

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ : ಮತದಾರರಿಂದ ಉತ್ತಮ ಸ್ಪಂದನೆ : ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ?

  ಚಿತ್ರದುರ್ಗ .26: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ದಾಖಲಾಗಿದೆ‌. ಬೆಳಗಿನ 11 ಗಂಟೆವರೆಗೆ ಶೇ 21.75 % ಮತದಾನ ದಾಖಲಾಗಿದೆ. ವಿಧಾನ ಸಭಾ ಕ್ಷೇತ್ರವಾರು ಚಳ್ಳಕೆರೆ- 22.55%, ಚಿತ್ರದುರ್ಗ-23.73%,ಹಿರಿಯೂರು-20.79% , ಹೊಳಲ್ಕೆರೆ

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ –

error: Content is protected !!