ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಆ.08) :
ಎಸ್ಸ್‍ನ್‍ರವರು ನಮ್ಮ ಹಿಂದಿನ ಪೀಳಿಗೆಗೆ ಪ್ರಸ್ತುತವಾಗಿದ್ದರು, ಅದೇ ರೀತಿ ಮುಂದಿನ ಪೀಳಿಗೆಗೆ ಪ್ರಸ್ತುತರಾಗಬೇಕಿದೆ ಎಂದು ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಹೂರ ವಲಯದ ಸಿಬಾರದ ಎಸ್ಸ್‍ನ್ ಸ್ಮಾರಕದ ಬಳಿ ಮಂಗಳವಾರ ನಡೆದ ಎಸ್ಸ್‍ನ್ ರವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಎಸ್ಸ್‍ನ ಸ್ಮಾರಕದ ಬಳಿಯಲ್ಲಿ ಪ್ರತಿ ವರ್ಷ ಅವರ ಹುಟ್ಟುಹಬ್ಬ ಮತ್ತು ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವುಗಳು ಸಾಂಕೇತಿಕವಾಗಿ ಸೇರುತ್ತೇವೆ. ಈ ಸ್ಮಾರಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುಂದಿನ ಪೀಳಿಗೆಗೆ ಹೂಸ ಸಂದೇಶವನ್ನು ನೀಡಬೇಕಿದೆ ಎಂದರು.
ಈಗಿನ ಪ್ರಸ್ತುತ ರಾಜಕಾರಣ ಮತ್ತು ಸಂವಿಧಾನ ತಳ ಹದಿಗೆ ವ್ಯವಸ್ಥೆಗೆ ಎಸ್ಸ್‍ನ್ ಸ್ಮಾರಕ ಬಹು ದೊಡ್ಡ ಕೇಂದ್ರವಾಗಿದೆ. ಇಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡುತ್ತಾ ಬರಲಾಗಿದೆ. ಅದರೂ ಸಹಾ ಎಸ್ಸ್‍ನ್ ಸ್ಮಾರಕ ಇವರ ಸ್ಮರಣೆ ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ. ಏಕೆಂದರೆ ಸ್ವಾತಂತ್ರ್ಯ ಬಂದು 75 ವರ್ಷವಾಗಿರುವ ಹಿನ್ನಲೆಯಲ್ಲಿ ಕಲುಷಿತಗೂಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆ ಮತ್ತು ರಾಜಕಾರಣ ವ್ಯವಸ್ಥೆಗೆ ಎಸ್ಸ್‍ನ್‍ರವರ ಆಡಳಿತ ವ್ಯವಸ್ಥೆ ಮತ್ತು ಅವರ ವ್ಯಕ್ತಿತ್ವ ಜೀವನ ಇಂದಿನ ಪೀಳಿಗೆಗೆ ನಿಜಕ್ಕೂ ಸಹಾ ಮಾದರಿಯಾಗಬೇಕಿದೆ ಎಂದು ಶ್ರೀಗಳು ತಿಳಿಸಿದರು.
ಇಂದಿನ ರಾಜಕಾರಣಕ್ಕೆ ಎಸ್ಸ್‍ನ್ ರವರು ಪ್ರಸ್ತುತ ಅಲ್ಲ ಎನ್ನುವುದನ್ನು ನಿಸಂಶಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಎಸ್ಸ್‍ನ್‍ರವರು ಅವರು ಕನಸಿನಲ್ಲಿಯೂ ಸಹಾ ಮುಂದೊಂದಿ ದಿನ ಇಂತಹ ರಾಜಕೀಯ ವ್ಯವಸ್ಥೆ ಕಲುಷಿತಗೊಳ್ಳಬಹುದೆಂದು ಅವರು ಯಾವೂದೇ ಒಂದು ಕಲ್ಪನೆಯನ್ನು ಮಾಡಿಕೊಂಡಿರಲಿಲ್ಲ, ಎನ್ನುವಂತಹುದನ್ನು ನೆನಪನ್ನು ಮಾಡಿಕೊಳ್ಳಬಹುದಾಗಿದೆ ಎಂದ ಶ್ರೀಗಳು ತಿಳಿಸಿದರು.
ಇಂತಹ ಎಸ್ಸ್‍ನ್‍ರವರು ಇಂದಿನ ರಾಜಕಾರಣಕ್ಕೆ ಪ್ರಸ್ತುತ ಎಂದು ಯಾಕೆ ಹೇಳಬೇಕೆಂದರೆ ಮುಂದಿನ ಪೀಳಿಗೆ ಭವಿಷ್ಯದ ಭಾರತಕ್ಕೆ ಎಸ್ಸ್‍ನ್ ರವರ ಆದರ್ಶ ತತ್ವಗಳು ಮಾದರಿಯಾಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡಿ ಇಡಿ ಭಾರತದ ಪ್ರತಿಯೂಬ್ಬರು ಅವರ ತತ್ವ ಆದರ್ಶಗಳನ್ನು ಅಳವಡಿಕೆ ಮಾಡಿಕೊಳ್ಳುವುದು ಅಗತ್ಯ ಆದರೆ ಇದರಲ್ಲಿ ಕೆಲವರಾದರೂ ಅವರ ಅನುಯಾಯಿಗಳಾದ ನಾವುಗಳು ಆ ನಿಟ್ಟಿನಲ್ಲಿ ಚಿಂತನೆ ಮಾಡುತ್ತಾ ಹೋದಾಗ ಅದನ್ನು ನೋಡಿ ಇತರರು ಕೂಡಿ ಆವರ ತತ್ವ ಅದರ್ಶಗಳನ್ನು ಆಳವಡಿಕೆ ಮಾಡಿಕೊಳ್ಳಬಹುದಾಗಿದೆ. ಎಸ್ಸ್‍ನ್ ರವರು ಮುಂದಿನ ಪೀಳಿಗೆಗೆ ಪ್ರಸ್ತುತವಾಗಬೇಕು ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸ್‍ನ್ ಸ್ಮಾರಕದ ಕಾರ್ಯದರ್ಶಿ ಹೆಚ್.ಹನುಮಂತಪ್ಪ, ಟ್ರಸ್ಟ್‍ನ ನಿರ್ದೆಶಕರಾದ ಕೆ.ಇ.ಬಿ. ಷಣ್ಮುಖಪ್ಪ, ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಜಯದೇವಮೂರ್ತಿ, ರೋಟರಿ ಕ್ಲಬ್‍ನ ಅದ್ಯಕ್ಷರಾದ ಕನಕರಾಜು, ಸದಸ್ಯರಾದ ಎಸ್.ವಿರೇಶ್, ವೀರಭದ್ರಸ್ವಾಮಿ, ಪತ್ರಕರ್ತರಾದ ಉಜ್ಜನಪ್ಪ, ಕಾಂಗ್ರೆಸ್ ಮುಖಂಡರಾದ ಎಸ್.ಎಂ.ಎಲ್. ತಿಪ್ಪೇಸ್ವಾಮಿ ದಿನಗೂಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಗುತ್ತಿನಾಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಹಾಗೂ ಗುತ್ತಿನಾಡು ಗ್ರಾಮಸ್ಥರು ಉಪಸ್ಥಿತರಿದ್ದರು.