ದೆಹಲಿ: ಇಂದು ದೆಹಲಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಉಗ್ರ ಯಾಸಿನ್ ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ ಆದೇಶ ಹೊರಡಿಸಿದೆ. ಟೆರರ್ ಫಂಡಿಂಗ್ ಮತ್ತು ದೇಶ ವಿರೋಧಿ ಕೆಲಸಗಳಲ್ಲಿ ಭಾಗಿಯಾಗಿದ್ದ ಉಗ್ರ ಯಾಸಿನ್ ಗೆ 10 ಲಕ್ಷ 55 ಸಾವಿರ ದಂಡದ ಜೊತೆಗೆ 70 ವರ್ಷ ಜೈಲು ಮತ್ತು ಜೀವಾವಧಿ ಶಿಕ್ಷೆ ನೀಡಿದೆ.
2017ರ ಕಾಶ್ಮೀರಿ ಕಣಿವೆಯಲ್ಲಿ ನಡೆದ ಉಗ್ರ ಚಟುವಟಿಕೆಗಳು ಮತ್ತು ದಾಳಿಗೆ ಆರ್ಥಿಕ ನೆರವು ನೀಡಿದ್ದ ಪ್ರಕರಣದಲ್ಲಿ ಉಗ್ರ ಯಾಸಿನ್ ಕೋರ್ಟ್ ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಯಾಸಿನ್ ಮಲ್ಲಿಕ್ ವಿರುದ್ಧ ಭಯೋತ್ಪಾದನೆ, ಭಯೋತ್ಪಾದನೆಗೆ ನಿಧಿ ಸಂಗ್ರಹ, ಭಯೋತ್ಪಾದಕ ಕೃತ್ಯಕ್ಕೆ ಸಂಚು, ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವುದು ಸೇರಿದಂತೆ ಹಲವು ಕೇಸ್ ಗಳು ದಾಖಲಾಗಿದ್ದವು.
ಈ ಎಲ್ಲಾ ಪ್ರಕರಣ ಸಂಬಂಧ ಇಂದು ದೆಹಲಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 70 ವರ್ಷ ಜೈಲು ಶಿಕ್ಷೆ ಮುಗಿದ ಬಳಿಕ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.