ಬಳ್ಳಾರಿಯಲ್ಲಿ NHM/NUHM ಹುದ್ದೆಗಳು ಖಾಲಿ : ಪರೀಕ್ಷೆಯೇ ಇಲ್ಲದೆ ನೇಮಕ..!

suddionenews
1 Min Read

ಬಳ್ಳಾರಿ: ಕೆಲಸಕ್ಕಾಗಿ ಹುಡುಕುತ್ತಿರುವ ಸ್ಥಳೀಯರಿಗೆ ಇಲ್ಲೊಂದಿಷ್ಟು ಅವಕಾಶಗಳಿವೆ. ಬಳ್ಳಾರಿ ಜಿಲ್ಲೆಯಲ್ಲಿ 2024-25ನೇ ಸಾಲಿನ NHM/NUHM ಹಾಗೂ ಪಿಎಂ ಅಭೀಮ್ ಕಾರ್ಯಕ್ರಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಕೆಲಸ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಈ ಸಂಬಂಧ ಕಳೆದ ತಿಂಗಳು ಅಂದ್ರೆ ಆಗಸ್ಟ್ 8ರಂದೇ ಕಡತಗಳ ಟಿಪ್ಪಣಿಗೆ ಅನುಮೋದನೆ ಕೊಡಲಾಗಿತ್ತು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು. ಈ ಹುದ್ದೆಗೆ ಸೇರಬೇಕೆಂದು ಬಯಸುವವರಿಗೆ ಯಾವುದೇ ಶುಲ್ಕ, ಪರೀಕ್ಷೆ ಇರುವುದಿಲ್ಲ. ನೇರವಾಗಿಯೇ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮಾಸಿಕ ಸಂಭಾವನೆ 14,186 ರಿಂದ 30,000 ಸಾವಿರದ ತನಕ ಇದೆಮ ಹಾಗಾದ್ರೆ ಯಾವೆಲ್ಲಾ ಹುದ್ದೆಗಳಿಗೆ ಕಾಲ್ ಫಾರ್ಮ್ ಮಾಡಿದ್ದಾರೆ ಎಂಬುದನ್ನು ಇಲ್ಲಿ ಮಾಹಿತಿ ನೀಡಲಾಗಿದೆ.

ಸ್ಟಾಫ್ ನರ್ಸ್ -45 ಹುದ್ದೆಗಳು ಖಾಲಿ ಇದಾವೆ. ಕಿರಿಯ ಆರೋಗ್ಯ ಸಹಾಯಕ -12, ಆಡಿಯೋಮೆಟ್ರಿಕ್ ಅಸಿಸ್ಟೆಂಟ್-01, ಬ್ಲಾಕ್ ಎಪಿಡೆಮಿಯೋಲಾಜಿಸ್ಟ್ -1, ಇನ್ ಸ್ಟ್ರಕ್ಟರ್ -1, ಜಿಲ್ಲಾ ಸಂಯೋಜಕರು -1, ಆಪ್ತ ಸಹಾಯಕ ಹುದ್ದೆ -1 ಬಾಕಿ ಇದೆ. ಇನ್ನು ಅರ್ಜಿಬ ಸಲ್ಲಿಸುವವರು ಆಯಾ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ ಪಡೆದಿರಬೇಕು. ವಯಸ್ಸಿನ ಮಿತಿಯೂ45 ವರ್ಷ ತುಂಬಿರಬಾರದು. ಆಸಕ್ತರು Ballari.nic.in ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅರ್ಜಿ ಅಲ್ಲಿಯೇ ಪಡೆದು ಅಪ್ಲೈ ಮಾಡಬಹುದು. ಕಚೇರಿಯಿಂದಲೂ ನೇರವಾಗಿ ಪಡೆದು ಅಪ್ಲೈ ಮಾಡಲು ಅವಕಾಶವಿದೆ.

Share This Article
Leave a Comment

Leave a Reply

Your email address will not be published. Required fields are marked *