ಇತ್ತಿಚೆಗಷ್ಟೇ ನಮ್ಮ ಇಸ್ರೋ ಸಂಸ್ಥೆ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುವಂತ ಸಾಧನೆ ಮಾಡಿ ತೋರಿಸಿದೆ. ಚಂದ್ರಯಾನ 3 ಸಕ್ಸಸ್ ಖುಷಿಯಲ್ಲಿದೆ. ಇದರ ನಡುವೆ ಸೂರ್ಯಯಾನಕ್ಕೂ ಮುನ್ನುಡಿ ಬರೆದಾಗಿದೆ. ಈಗ ಏನಿದ್ದರು, ಸಮುದ್ರಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಈ ಯೋಜನೆಯಲ್ಲಿ ಮಾನವರೇ ಸಮುದ್ರಕ್ಕೆ ಇಳಿಯುತ್ತಾರೆ. ಸಬ್ ಮರ್ಸಿಬಲ್ ಮತ್ಸ್ಯ-6000 ಎಂಬ ಹೆಸರಿನಲ್ಲಿ ಸಮುದ್ರಯಾನ ಆರಂಭವಾಗಲಿದೆ.
Next is "Samudrayaan"
This is 'MATSYA 6000' submersible under construction at National Institute of Ocean Technology at Chennai. India’s first manned Deep Ocean Mission ‘Samudrayaan’ plans to send 3 humans in 6-km ocean depth in a submersible, to study the deep sea resources and… pic.twitter.com/aHuR56esi7— Kiren Rijiju (@KirenRijiju) September 11, 2023
ಮುಂದಿನ ವರ್ಷ ಈ ಯೋಜನೆಗೆ ಚಾಲನೆ ಸಿಗಲಿದೆ. ಮೂರು ಜನರನ್ನು ನೀರಿನ ಆಳಕ್ಕೆ ಕಳುಹಿಸಲಾಗುತ್ತದೆ. ಚೆನ್ನೈನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಲ್ಲಿ ಲಾಂಚ್ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಸಮುದ್ರಯಾನ ಯೋಜನೆಯಲ್ಲಿ ಮೂರು ಜನ ಆರು ಸಾವಿರ ಅಡಿ ಆಳಕ್ಕೆ ಇಳಿಯಲಿದ್ದಾರೆ.
2024ಕ್ಕೆ ಈ ಸಬ್ ಮರ್ಸಿಬಲ್ ಮತ್ಸ್ಯ ಮಿಷನ್ ಅನ್ನು ಕರಾವಳಿ ಮೂಲಕ ಬಂಗಾಳ ಕೊಲ್ಲಿಯ ಮೂಲದ ಆಳದವರೆಗೂ ಕಳುಹಿಸುವ ಯೋಜನೆ ಇದಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿರುವ ಖನಿಜಗಳ ಪತ್ತೆ ಮಾಡಲಾಗುತ್ತದೆ. ನೀರಿನ ಆಳದಲ್ಲಿ ಕೋಬಾಲ್ಟ್, ನಿಕ್ಕಲ್, ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ ಮತ್ತು ಗ್ಯಾಸ್ ಹೈಡ್ರೇಟ್ ಖನಿಜಗಳು ಶೋಧನೆ ಮಾಡಲಿವೆ.