ಬೆಂಗಳೂರು; ಇಷ್ಟು ದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಬಣದವರು ನಮ್ಮ ನೆಕ್ಸ್ಟ್ ಸಿಎಂ ಡಿಕೆ ಶಿವಕುಮಾರ್ ಅಂತಾನೇ ಹೇಳ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ಕನಸು ದೊಡ್ಡದಾಗಿದೆ. ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಹೆಚ್ಚಾಗಿದ್ದು, ಸಿಎಂ ಆಗುವ ಕನಸನ್ನ ಕಂಡಿದ್ದರು. ಅದಕ್ಕಾಗಿ ಕಾಯ್ತಾ ಇದ್ದಾರೆ ಕೂಡ. ಇದರ ಬೆನ್ನಲ್ಲೇ ನಟ ಧ್ರುವ ಸರ್ಜಾ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದಿದ್ದಾರೆ. ಇದು ಬಾರೀ ಕುತೂಹಲಕ್ಕೆ ಕಾರಣವಾಗಿದೆ.

ಡಿಕೆಶಿ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಸ್ಪೆಷಲ್ ಗೆಸ್ಟ್ ಆಗಿ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಮುಂದಿನ ಸಿಎಂ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಟೈಂ ಮ್ಯಾನೇಜ್ಮೆಂಟ್ ಅಂತ ಮಾತಾಡೋದಕ್ಕಿಂತ ಮುಂಚೆ ನಾನು ಅಣ್ಣನ ಕೇಳುತ್ತಿದ್ದೆ. ಅಣ್ಣಾ ಎಷ್ಟು ಗಂಟೆಗೆ ಮಲಗುತ್ತೀರಾ..? ಎಷ್ಟು ಗಂಟೆಗೆ ಎದ್ದೇಳ್ತೀರಾ ಅಂತ. ಪಾಪ ಅವರು ತಮ್ಮ ಬ್ಯುಸಿ ಶೆಡ್ಯೂಲ್ ಬಗ್ಗೆ ಹೇಳಿದರು. ರಾತ್ರಿ 2.30ಕ್ಕೆ ಮಲಗಿಕೊಂಡು ಬೆಳಗ್ಗೆ 6.30ಕ್ಕೆ ಎದ್ದೆ ಎಂದರು. ಈ ಸ್ಥಾನಕ್ಕೆ ಬರುವುದಕ್ಕೆ ಎಷ್ಟೋ ವರ್ಷದಿಂದ ಮಾಡುತ್ತಾ ಇರುತ್ತಾರೆ. ನಾನು ಯಾರ ಬಗ್ಗೆ ಮಾತಾಡ್ತಾ ಇದ್ದೀನಿ ಅಂತ ಗೊತ್ತಾಯ್ತಾ..? ಏ ನಮ್ಮ ಫ್ಯೂಚರ್ ಸಿಎಂ ಬಗ್ಗೆ ಮಾತಾಡ್ತಾ ಇದ್ದೀನಪ್ಪ ಎಂದರು. ಈ ಮಾತು ಕೇಳಿ ಡಿಕೆ ಶಿವಕುಮಾರ್ ಫ್ಯಾಮಿಲಿಯಂತು ಫುಲ್ ಖುಷಿಯಾಗಿದೆ. ಫ್ಯೂಚರ್ ಸಿಎಂ ಆಗ್ಬೇಕು ಅನ್ನೋ ಆಸೆಗೆ ಬೆಂಬಲ ನೀಡಿದರು.

