ಅಹಮದಾಬಾದ್: ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಗುರುವಾರ ಕೆಲವು ಎಮ್ಮೆಗಳು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎಂಜಿನ್ಗೆ ಹಾನಿಯಾಗಿದ್ದು, ಅದನ್ನು ರೈಲ್ವೇ ಸಿಬ್ಬಂದಿ ಸರಿಪಡಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಬೆಳಗ್ಗೆ 11:15ಕ್ಕೆ ಬಟ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಚಲಿಸುತ್ತಿದ್ದ ರೈಲಿಗೆ ಕೆಲವು ಎಮ್ಮೆಗಳು ಅಡ್ಡ ಬಂದು ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಗಾಂಧಿನಗರ ರಾಜಧಾನಿ ನಿಲ್ದಾಣದಿಂದ ಮುಂಬೈ ಸೆಂಟ್ರಲ್ಗೆ ಹೊರಟಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30, 2022 ರಂದು ಗಾಂಧಿನಗರ ಕ್ಯಾಪಿಟಲ್ ಮತ್ತು ಮುಂಬೈ ಸೆಂಟ್ರಲ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು.
ವಂದೇ ಭಾರತ್ ಎಕ್ಸ್ಪ್ರೆಸ್ ಗಂಟೆಗೆ ಗರಿಷ್ಠ 160 ಕಿಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಶತಾಬ್ದಿ ರೈಲಿನಂತಹ ಪ್ರಯಾಣದ ಗುಣಮಟ್ಟ ಮತ್ತು ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.