ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ವಿ ಸೋಮಣ್ಣ ಅವರಿಗೆ ಅಸಮಾಧಾನವಿರುವುದು ಎಲ್ಲರಿಗೂ ಬಹಿರಂಗವಾಗಿರುವ ವಿಚಾರ. ಸಾಕಷ್ಟು ಸಲ ಹೈಕಮಾಂಡ್ ನಾಯಕರು, ಬಿಜೆಪಿ ನಾಯಕರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಅಸಮಾಧಾನ ಆಗಾಗ ಹೊರಗೆ ಬರುತ್ತಲೇ ಇರುತ್ತದೆ. ವರ್ಷದ ಕೊನೆಯಲ್ಲಿ ವಿ ಸೋಮಣ್ಣ ಮತ್ತೆ ಬೇಸರ ಹೊರ ಹಾಕಿದ್ದಾರೆ.
ವಿಜಯನಗರದ ತಮ್ಮ ಕಚೇರಿಯಲ್ಲಿ ಮಾತನಾಎಇದ ವಿ ಸೋಮಣ್ಣ, ನನಗೆ ಆಗಿರುವ ಅನಾನುಕೂಲ ಯಾರಿಗೂ ಆಗುವುದು ಬೇಡ. ಹೊಸ ವರ್ಷ ಆರಂಭವಾಗುತ್ತಿದೆ.ವಹಳೆಯ ಕಹಿಯ ಘಟನೆ ಮರೆತು ಮುಂದೆ ಹೊಸ ವರ್ಷದಲ್ಲಿ ಮುನ್ನಡೆಯೋಣಾ. ಜನವರಿ 7 ಅಥವಾ 8 ಕ್ಕೆ ದೆಹಲಿಗೆ ಹೋಗುತ್ತೇನೆ ಎಂದು ಭಾವುಕರಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಅವರು ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ವಿ ಸೋಮಣ್ಣ, ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು. ಅವರು ಸ್ಪರ್ಧೆ ಮಾಡು ಎಂದರೆ ಮಾಡಬೇಕಾಗುತ್ತದೆ. ನನಗೆ ನೇರವಾಗಿ ತೊಂದರೆಯಾಗಿದೆ. ಇದನ್ನು ರಾಷ್ಟ್ರೀಯ ನಾಯಕರ ಬಳಿ ಚರ್ಚೆ ಮಾಡುತ್ತೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನು ಕರೆಸಿ ಸೂಚನೆ ನೀಡಬೇಕು. ನಮ್ಮ ಮೇಲೆ ಪ್ರಹಾರ ಮಾಡದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರಾಷ್ಟ್ರೀಯ ನಾಯಕರ ನಿಲುವೆ ನನ್ನ ನಿಲುವು. ನನ್ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೋ ಹಾಗೆಯೇ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದ ಬಗ್ಗೆಯಿದ್ದ ಮನಸ್ತಾಪ ದೂರವಾದಂತೆ ಕಾಣುತ್ತಿದೆ. ಪಕ್ಷವನ್ನ ಬಿಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.