ಸುದ್ದಿಒನ್, ಚಿತ್ರದುರ್ಗ, ಜನವರಿ.01 : ಇಡೀ ಜಗತ್ತೆ ಹೊಸ ವರ್ಷದ ಸಂಭ್ರಮದಲ್ಲಿದೆ. ರಾತ್ರಿಯೆಲ್ಲಾ ಹಲವರು ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ. ಇನ್ನು ಹಲವರು ಬೆಳಗ್ಗೆಯಿಂದ ದೇವರು, ದೇವಸ್ಥಾನ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಒಂದು ದಿನದ ಪ್ರವಾಸಕ್ಕೆ ಎಲ್ಲರಿಗೂ ಬಹಳ ಇಷ್ಟವಾಗುವ ಸ್ಥಳ ಎಂದರೆ ಅದು ನಮ್ಮ ಚಿತ್ರದುರ್ಗ. ಕೋಟೆನಾಡಿನಲ್ಲಿ ನೋಡಬೇಕಾದ ಸ್ಥಳಗಳು ಬಹಳಷ್ಟಿವೆ. ಹೀಗಾಗಿ ಹೊಸ ವರ್ಷಕ್ಕೆ ಫ್ಯಾಮಿಲಿ ಸಮೇತ ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜನಸಾಗರವೇ ಹರಿದು ಬರುತ್ತಿದೆ.
ಅದರಲ್ಲೂ ಕೋಟೆಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕೇಕ್ ಸಮೇತ ಬಂದು ಇಲ್ಲಿಯೇ ಸೆಲೆಬ್ರೇಷನ್ ಮಾಡಿದ್ದಾರೆ. ಕಲರ್ ಫುಲ್ ಡ್ರೆಸ್ ಗಳನ್ನ ತೊಟ್ಟು ಮಿರ ಮಿರ ಮಿಂಚುತ್ತಾ, ಕೋಟೆಯೊಳಗೆ ಫ್ಯಾಮಿಲಿ ಸಮೇತ ಸೆಲೆಬ್ರೇಷನ್ ಮಾಡಿದ್ದಾರೆ. ಕೋಟೆಯ ಅಕ್ಕತಂಗಿ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ, ಓಬ್ಬವನ ಕಿಂಡಿ, ಉಯ್ಯಾಲೆ ಕಂಬ ಹಾಗೂ ಚಂದ್ರವಳ್ಳಿ, ಮುರುಘಾಮಠ ಮತ್ತಿತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂದರು. ಇನ್ನು ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಟಿಕೆಟ್ ಪಡೆದು ಕೋಟೆ ಪ್ರವೇಶಿಸಲು ಹರಸಾಹಸ ಪಡೆಬೇಕಾಯಿತು. ಉಳಿದಂತೆ ಮುರುಘಾ ಮಠದಲ್ಲಿಯೂ ಸಹ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು. ಮುರುಘಾ ಮಠದಲ್ಲಿನ ಸುಂದರವಾದ ಪಾರ್ಕ್‌ನಲ್ಲಿ ಸೆಲ್ಫೀ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಚಿತ್ರದುರ್ಗದ ನಗರದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ, ಕೆಳಗೋಟೆಯ ವೆಂಕಟೇಶ್ವರ ದೇವಾಲಯ, ಚನ್ನಕೇಶವ ಸ್ವಾಮಿ ದೇವಾಲಯ, ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಉಚ್ಚಂಗಿ ಯಲ್ಲಮ್ಮ ದೇವಾಲಯ, ಬರಗೇರಮ್ಮ ದೇವಸ್ಥಾನ, ಮಾರಮ್ಮ ದೇವಸ್ಥಾನ, ಹಿರಿಯೂರಿನ ವಾಣಿ ವಿಲಾಸ ಸಾಗರ, ತೇರುಮಲ್ಲೇಶ್ವ ದೇವಸ್ಥಾನ, ವದ್ದಿಕೆರೆಯ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ, ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ, ನಾಯಕನಹಟ್ಟಿಯ ಶ್ರೀ ತಿಪ್ಪೇರುದ್ರಸ್ವಾಮಿ, ಹೊಳಲ್ಕೆರೆಯ ಬಯಲು ಗಣಪತಿ ದೇವಾಲಯ, ಸೇರಿದಂತೆ ಮತ್ತಿತರ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದರು. ಬೆಳಗಿನಿಂದಲೂ ಭಕ್ತರು ದೇವರ ದರ್ಶನ ಪಡೆದರು. ಇನ್ನೂ 2025ರ ವರ್ಷದ ಮೊದಲ ದಿನ ಬುಧವಾರವಾಗಿದ್ದರಿಂದ ಆಂಜನೇಯ, ರಂಗನಾಥ ಸ್ವಾಮಿ ಹಾಗೂ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತ್ತು. ಹೀಗೆ ಜನರು ಪ್ರವಾಸಿ ತಾಣಗಳು, ಪ್ರಸಿದ್ದ ದೇವಾಲಯಗಳಿಗೆ ಬಂದು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.