ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 17 : ಒಂದು ಕಾಲದಲ್ಲಿ ಬಡತನದಲ್ಲಿದ್ದ ಭಾರತ ದೇಶದಲ್ಲಿ ಈಗ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ನಮ್ಮ ದೇಶದ ವಿಜ್ಞಾನಿಗಳು, ವೈದ್ಯರು, ನರ್ಸ್ಗಳಿಗೆ ದೇಶ ವಿದೇಶಗಳಲ್ಲಿ ಬಹಳ ಬೇಡಿಕೆಯಿದೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಕೋಟೆ ಸಮೀಪವಿರುವ ರಾಘವೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ 2025 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ಯಾರಾ ಮೆಡಿಕಲ್, ನರ್ಸಿಂಗ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ನಮ್ಮ ದೇಶದ ಮಕ್ಕಳು ಅತ್ಯಂತ ಚುರುಕಾಗಿದ್ದಾರೆ. ಅವಕಾಶ ಸಿಗಬೇಕು. ಇಸ್ರೋದಲ್ಲಿ ಭಾರತದ ವಿಜ್ಞಾನಿಗಳು ಸಾಧನೆ ಮಾಡಿರುವುದರಿಂದ ಮುಂದುವರೆದ ದೇಶಗಳು ಭಾರತದ ಕಡೆ ತಿರುಗಿ ನೋಡುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿರವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಹೊರಟಿರುವುದೇ ಕಾರಣ ಎಂದರು.
ಮುಂದಿನ ಭವಿಷ್ಯದ ಪ್ರಜೆಗಳಾದ ನೀವುಗಳು ದೇಶಾಭಿಮಾನ ಮೈಗೂಡಿಸಿಕೊಂಡು ಶಿಕ್ಷಣದ ಕಡೆ ಗಮನ ಕೊಡುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ನರ್ಸಿಂಗ್
ಪ್ಯಾರಾ ಮೆಡಿಕಲ್ ಹಾಗೂ ಬಿ.ಇ.ಡಿ.ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡುತ್ತ ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕಗಳಿಗೂ ಮೌಲ್ಯವಿದೆ. ನರ್ಸಿಂಗ್, ಪ್ಯಾರಾ
ಮೆಡಿಕಲ್ ಓದಿದ ಮಕ್ಕಳಿಗೆ ಹೊರ ದೇಶಗಳಲ್ಲಿ ಹೋಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಮೊಬೈಲನ್ನು ಒಳ್ಳೆಯದಕ್ಕಷ್ಟೆ ಬಳಸಿಕೊಳ್ಳಿ. ನಿಮ್ಮ ಮುಂದಿನ ಹಾದಿ ಸುಗಮವಾಗಿರಬೇಕಾದರೆ ಶಿಕ್ಷಣದ ಕಡೆ ಗಮನ ಕೊಡಿ ಎಂದು ತಿಳಿಸಿದರು.
ನಿವೃತ್ತ ವಲಯ ಅರಣ್ಯಾಧಿಕಾರಿ ಹೆಚ್.ರಾಮಮೂರ್ತಿ ಮಾತನಾಡಿ ಪದವಿ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಉತ್ತೀರ್ಣರಾದರೆ ದೊಡ್ಡ ಹುದ್ದೆಯನ್ನು ಅಲಂಕರಿಸಬಹುದು. ನಾಯಕತ್ವ ಗುಣವಿರುವ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಎಲ್ಲರಲ್ಲಿಯೂ ಆತ್ಮವಿಶ್ವಾಸ, ಸ್ಥೈರ್ಯ ತುಂಬಬೇಕು. ಕೆಲಸ ಮಾಡುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ರಾಘವೇಂದ್ರ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್, ಶಂಕರಪ್ಪ, ಪ್ರೇಮ, ಡೇವಿಡ್, ಇಮ್ರಾನ್ ವೇದಿಕೆಯಲ್ಲಿದ್ದರು.


