ಶಿವಮೊಗ್ಗ: ಮಾಡಿರುವ ಕೆಲಸಕ್ಕೆ ಹಣ ಮೂವ್ ಮಾಡುವುದಕ್ಕೆ 40% ಕಮೀಷನ್ ಕೇಳುತ್ತಾ ಇದ್ದಾರೆ ಎಂದು ಆರೋಪಿಸಿ, ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದರು. ಆದರೆ ಕಡೆಗೆ ಇತ್ತಿಚೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲೂ ಈಶ್ವರಪ್ಪ ನೇರ ಕಾರಣ ಎಂದು ಬರೆದಿದ್ದಾರೆ. ಇದಕ್ಕೆ ಈಶ್ವರಪ್ಪ ರಾಜೀನಾಮೆಯನ್ನು ನೀಡಿ ಆಗಿದೆ.
ಇದೀಗ ಈ ಸಾವಿನ ಸಂಬಂಧ ಸಚಿವ ಈಶ್ವರಪ್ಪ ಅವರು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, ಯಾರಾದರೂ ಸಂತೋಷ್ ನನ್ನು ದುರುಪಯೋಗ ಪಡಿಸಿಕೊಂಡರಾ..? ಎಂಬ ಅನುಮಾನ ನನ್ನಲ್ಲೂ ಮೂಡಿದೆ. ಹೀಗಾಗಿ ಆದಷ್ಟು ಬೇಗ ತನಿಖೆಯಿಂದ ಹೊರ ಬರಲಿ ಎಂದು ಕಾಯುತ್ತಿದ್ದೇನೆ. ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಅನುಮಾನ ಮೂಡಿದೆ. ಆ ಷಡ್ಯಂತ್ರದ ಹಿಂದೆ ಇರುವುದು ವ್ಯಕ್ತಿಯೋ, ಸಂಸ್ಥೆಯೋ, ಪಕ್ಷವೋ ಎಂಬುದು ಹೊರಗೆ ಬರಬೇಕು. ಈ ಸಂಬಂಧ ಮುಖ್ಯಮಂತ್ರಿಗಳ ಬಳಿಯೂ ಮನವಿ ಮಾಡಿದ್ದೇನೆ. ಆದಷ್ಟು ಬೇಗ ತನಿಖೆ ನಡೆಸಿ ವರದಿ ನೀಡಲು ತಿಳಿಸಿದ್ದೀನಿ.
ಇನ್ನು ಅವರ ಮನೆಯವರ ಬಗ್ಗೆ ನನಗೂ ಸಿಂಪತಿ ಇದೆ. ನ್ಯಾಯ ಹೊರಗೆ ಬರಬೇಕು. ತಪ್ಪು ಮಾಡಿದವರು ಹೊರಗೆ ಬರಬೇಕು. ಇದರ ಹಿಂದೆ ಷಡ್ಯಂತ್ರ ನಡೆದಿದೆ. ಷಡ್ಯಂತ್ರ ನಡೆದ ವ್ಯಕ್ತಿಗಳು ಹೊರ ಬರಬೇಕು. ಆಗ ಅವನ ಆತ್ಮಕ್ಕೂ ಶಾಂತಿ ಸಿಗುತ್ತೆ. ಆತ್ಮಹತ್ಯೆಯೋ, ಕೊಲೆಯೋ ಏನು ಎಂಬುದು ಗೊತ್ತಿಲ್ಲ. ತನಿಖೆಯ ನಂತರ ಹೊರ ಬರುತ್ತೆ. ಆ ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.