ಬೆಂಗಳೂರು: ಕಳೆದ ಎರಡು ವರ್ಷದಿಂದ ನ್ಯೂ ಇಯರ್ ಸೆಲೆಬ್ರೇಷನ್ ಇಲ್ಲವೇ ಇಲ್ಲ. ಕೊರೊನಾ ಮಹಾಮಾರಿಯಿಂದಾಗಿ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಈ ವರ್ಷ ಹಾಗೇ ನೋಡೋದಕ್ಕೆ ಹೋದ್ರೆ ಕೊರೊನಾ ಕಡಿಮೆಯಾಗ್ತಾ ಇದ್ದದ್ದು ಕಂಡು ಎಲ್ಲರೂ ಖುಚಿಯಾಗಿದ್ರು. ಹಾಗಾದ್ರೆ ಈ ಬಾರಿ ಹಳೆಯ ರೀತಿಯಲ್ಲೇ ಗ್ರ್ಯಾಂಡ್ ಆಗಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಬಹುದು ಅಂತ. ಆದ್ರೆ ಈ ಮಧ್ಯೆ ಅದಕ್ಕೂ ಕುತ್ತು ತಂದಿರೋದು ಒಮಿಕ್ರಾನ್.
ಹೌದು ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚಳವಾಗುತ್ತಿರುವ ಕಾರಣ ನ್ಯೂ ಇಯರ್ ಸೆಲೆಬ್ರೇಷನ್ ಗೆ ಸರ್ಕಾರದಿಂದ ಟಫ್ ರೂಲ್ಸ್ ತಂದಿದೆ. ಬಾರ್ ಆಂಡ್ ರೆಸ್ಟೋರೆಂಟ್, ಪಬ್ ಗಳಿಗೆಲ್ಲಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. 50-50 ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಸಂಬಂಧ ಸುವರ್ಣ ಸೌಧದಲ್ಲಿ ಮಾತನಾಡಿರೋ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಹೆಚ್ಚಾಗುವ ಆತಂಕವಿರುವ ಕಾರಣ ಜನರು ಗುಂಪು ಗೂಡದಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಆದರೆ ಕ್ರಿಸ್ಮಸ್ ಆಚರಣೆ ವೇಳೆ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವ ಇಲ್ಲ ಎಂದು ಸ್ಒಷ್ಟಪಡಿಸಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆ ಗುಂಪುಗೂಡದಂತೆ ನಿಯಮ ಬಿಗಿಗೊಳಿಸಿದ್ದಾರೆ.