ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಅಭಿಮಾನಿಗಳಂತೂ ಕಳೆದ ಒಂದು ವಾರದಿಂದಾನೂ ಮನೆ ಬಳಿ ಬಂದು ದವಸ-ಧಾನ್ಯಗಳನ್ನು ನೀಡುತ್ತಿದ್ದಾರೆ. ಊರಲ್ಲೆಲ್ಲಾ ದರ್ಶನ್ ಅವದ ಪೋಸ್ಟರ್ ಗಳು ರಾರಾಜಿಸುತ್ತಿವೆ. ಇಷ್ಟು ಪ್ರೀತಿ ಕೊಡುವ ಅಭಿಮಾನಿಗಳಿಗೆ ದರ್ಶನ್ ಸಮಯ ಕೊಡದೆ ಇರುತ್ತಾರೆಯೇ. ಇಂದು ಇಡೀ ದಿನ ಅಭಿಮಾನಿಗಳಿಗಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು ದರ್ಶನ್.

ನಿನ್ನೆ ರಾತ್ರಿಯಿಂದಾನೇ ದರ್ಶನ್ ಮನೆಯ ಬಳಿ ಅಭಿಮಾನಿಗಳ ದಂಡೇ ನೆರೆದಿತ್ತು. ಹನ್ನೆರಡು ಗಂಟೆಯಿಂದಾನು ಶುಭಾಶಯ ತಿಳಿಸಲು ಆರಂಭಸಿದರು. ನಿದ್ದೆ ಇಲ್ಲದೆ ಇದ್ದರು. ಬೆಳಗ್ಗೆಯೂ ದರ್ಶನ್ ಅಭಿಮಾನಿಗಳ ಜೊತೆಗೆ ಕಾಲ ಕಳೆದಿದ್ದಾರೆ. ಇಂದು ವಿಶೇಷ ಗಿಫ್ಟ್ ಎಂಬಂತೆ ಹೊಸ ಸಿನಿಮಾಗಳ ಅನೌನ್ಸ್ ಆಗಿದೆ. ಇರುವ ಸಿನಿಮಾಗಳಿಂದ ಪೋಸ್ಟರ್ ಗಳು ರಿಲೀಸ್ ಆಗಿವೆ. ಡೆವಿಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಹೊಸ ಸಿನಿಮಾ ಅನೌನ್ಸ್ ಆಗಿದೆ.

The Motion poster from my upcoming venture with #KVN–#Prems is out now
https://t.co/mQFXRjqhMz pic.twitter.com/l4rj8gNCc5
— Darshan Thoogudeepa (@dasadarshan) February 16, 2024
ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ದರ್ಶನ್ ಅವರು ಸಿನಿಮಾ ಮಾಡಲಿದ್ದಾರೆ. ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಇತ್ತು. ಇಂದು ಅದು ಸತ್ಯವಾಗಿದೆ. ದರ್ಶನ್ ಹಾಗೂ ಪ್ರೇಮ್ ಸಿನಿಮಾ ಅನೌನ್ಸ್ ಆಗಿದ್ದು, ಪೋಸ್ಟರ್ ನಲ್ಲಿ ರಾಮನ ಭಕ್ತ ಹನುಮ ಕಥೆ ಹೇಳುವುದಕ್ಕೆ ಹೊರಟಿರುವುದು ಕಾಣುತ್ತಿದೆ. ಕಾಲಿನ ಪೋಸ್ಟರ್ ಅಷ್ಟೇ ರಿಲೀಸ್ ಆಗಿದ್ದು, ಇನ್ಜಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಸದ್ಯ ಕಾಟೇರ ಯಶಸ್ಸಿನಲ್ಲಿರುವ ದರ್ಶನ್, ಡೆವಿಲ್ ಶುರು ಮಾಡಬಹುದು. ಪ್ರೇಮ್ ಅವರು ಕೂಡ ಸದ್ಯ ಕೆಡಿ ಬ್ಯುಸಿಯಲ್ಲಿದ್ದಾರೆ. ಹೀಗಾಗಿ ಹೊಸ ಸಿನಿಮಾದ ಅಪ್ಡೇಟ್ ತಡವಾಗಬಹುದು.

