ಬಳ್ಳಾರಿ: ಇತ್ತೀಚೆಗೆ ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದಾದ ಬೆನ್ನಲ್ಲೇ ಬಳ್ಳಾರಿಗೆ ನೂತನ ಐಜಿಪಿ ಹಾಗೂ ಎಸ್ಪಿಯನ್ನ ನೇಮಕ ಮಾಡಲಾಗಿದೆ. ಬಳ್ಳಾರಿ ವಲಯ ಐಜಿಪಿಯಾಗಿ ಹರ್ಷ ಗುಪ್ತಾ ನೇಮಕ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ. ಗಲಾಟೆಯ ಬೆನ್ನಲ್ಲೇ ಸರ್ಕಾರ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನ ನೇಮಕ ಮಾಡಿದೆ.
ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿದೆ. ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರು ಅಮಾನತ್ತಿನ ಬಳಿಕ ನೂತನ ಎಸ್ಪಿ ಆಗಿ ಸುಮನ್ ಡಿ ಪನ್ನೇಕರ್ ರನ್ನು ನೇಮಿಸಿದೆ.
ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆಯಾದ ಬಳಿಕ ಜನವರಿ 2 ರಂದೇ ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಈಗ ಆ ಸ್ಥಾನಕ್ಕೆ ಸುಮನ್ ಡಿ ಪನ್ನೇಕರ್ ಅವರನ್ನು ನೇಮಿಸಲಾಗಿದೆ.
ಸದ್ಯಕ್ಕೆ ಬಳ್ಳಾರಿ ಸಹಜ ಸ್ಥಿತಿಯಲ್ಲಿದೆ. ಬ್ಯಾನರ್ ಕಟ್ಟುವ ವೇಳೆ ನಡೆದ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತನೆ ಬಲಿಯಾದ. ರಾಜಶೇಖರ್ ಸಾವಿನ ಬಳಿಕ, ರಾಜಕಾರಣಿಗಳು ಮೃತರ ಕುಟುಂಬ ಭೇಟಿ ಮಾಡಿ, ಪರಿಹಾರವನ್ನು ನೀಡಿದ್ದಾರೆ. ಜೊತೆಗೆ ಇರ್ತೇವೆ ಎಂಬ ಭರವಸೆಯನ್ನು ಕೊಟ್ಟು ಬಂದಿದ್ದಾರೆ. ಆದರೆ ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿದ್ದು ಮಾತ್ರ ತುಂಬಲಾರದ ನಷ್ಟ. ಜೊತೆಗೆ ಎಂದಿಗೂ ಅರಗಿಸಿಕೊಳ್ಳಲಾಗದ ನೋವು ಇದು. ಮಗನ ಅಂತ್ಯಸಂಸ್ಕಾರ ಮಾಡಿ, ಆ ಹೆತ್ತವ್ವ ಕಣ್ಣೀರಾಕುತ್ತಾ ಕೂತಿದ್ದಾರೆ.






