ಇಂದಿನಿಂದ ನೂತನ ವಿದ್ಯುತ್ ದರ ಜಾರಿ

1 Min Read

 

ಬೆಂಗಳೂರು: ಹೊಸ ಹಣಕಾಸು ವರ್ಷ ಇಂದಿನಿಂದ ಪ್ರಾರಂಭವಾಗಿದೆ. ಹೀಗಾಗಿ ಕೆಲವು ವ್ಯವಹಾರಗಳ ರೀತಿ-ನೀತಿಯೂ ಬದಲಾವಣೆಯಾಗಲಿದೆ. ಅದರಲ್ಲೂ ವಿದ್ಯುತ್ ವಿಚಾರವಾಗಿ ಹಣಕಾಸು ವರ್ಷದ ಆರಂಭದಲ್ಲೇ ಗುಡ್ ನ್ಯೂಸ್ ಸಿಕ್ಕಿದೆ. ವಿದ್ಯುತ್ ದರ ಕಡಿತಗೊಂಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವೂ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಿದ್ದು, ಇಂದಿನಿಂದ ನೂತನ ದರ ಜಾರಿಗೆ ಬರಲಿದೆ.

100 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 1 ರೂಪಾಯಿ 10 ಪೈಸೆಯನ್ನು ಕಡಿತ ಮಾಡುವುದಾಗಿ ತಿಳಿಸಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್ಸಿ ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಎಸ್ಕಾಂಗಳಲ್ಲೂ ಏಕರೂಪದ ದರ ಜಾರಿಗೆ ಬಂದಿದೆ.

ಅದರಲ್ಲೂ 15 ವರ್ಷಗಳ ಬಳಿಕ ವಿದ್ಯುತ್ ದರ ಕಡಿತವಾಗಿದೆ. ಮುಂದಿನ ತಿಂಗಳ ಬಿಲ್ ನಲ್ಲಿ ದರ ಪರಿಷ್ಕರಣೆಯಾಗಿ ಬರಲಿದೆ. ಈ ಹಿಂದೆ ಯೂನಿಟ್ ಗೆ 0-100 ವರೆಗೆ 4.75 ಪೈಸೆ ಇತ್ತು. 100ರ ಮೇಲಿನ ಬಳಕೆಯ ಪ್ರತಿ ಯುನಿಟ್ ಗೆ 7 ರೂಪಾಯಿ ಇತ್ತು. ಇಂದಿನಿಂದ 100 ಯುನಿಟ್ ಮೇಲಿನ ಬಳಕೆ ದಾರರ ಪ್ರತಿ ಯುನಿಟ್ ಗೆ 5.90 ರೂಪಾಯಿ ಮಾತ್ರ ಪಾವತಿ ಮಾಡಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೃಹಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಉಚಿತ ಅಂತ ಘೋಷಣೆ ಮಾಡಿತ್ತು. ಅದರಂತೆ ಈಗಾಗಲೇ ಕೆಲ ತಿಂಗಳಿನಿಂದ 100 ಯೂನಿಟ್ ವಿದ್ಯುತ್ ಅನ್ನು ಗೃಹಜ್ಯೋತಿ ಮೂಲಕ ಉಚಿತವಾಗಿಯೇ ನೀಡಲಾಗುತ್ತಿದೆ. ಇದೀಗ ನೂರಕ್ಕೂ ಹೆಚ್ಚು ಯೂನಿಟ್ ಬಳಕೆ ಮಾಡುವವರಿಗೆ ದರ ಕಡಿತದ ಗುಡ್ ನ್ಯೂಸ್ ಅನ್ನು ನೀಡಿದೆ ಸರ್ಕಾರ.

Share This Article
Leave a Comment

Leave a Reply

Your email address will not be published. Required fields are marked *