ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಹೀಗಿರುವಾಗ ಎಲ್ಲಾ ಪಕಗಷದವರು ತಮ್ಮ ಪಕ್ಷ ಬಲವರ್ಧನೆಯಾಗಬೇಕು. ಜನರುಗೆ ಹತ್ತಿರತ್ತಿರವಾಗಲೇಬೇಕು. ಹೀಗಾಗಿ ಎಲ್ಲಾ ಪಕ್ಷಗಳು ಪಕ್ಷದ ಬಲವರ್ಧನೆಗೆ ಒತ್ತು ನೀಡಲಿದ್ದಾರೆ. ಅದರಂತೆ ಜೆಡಿಎಸ್ ಕೂಡ ಪಕ್ಷ ಬಲವರ್ಧನೆಗಾಗಿ ಕೋರ್ ಕಮಿಟಿ ಹೊಸದಾಗಿ ರಚನೆ ಮಾಡಿದೆ.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ನೇತೃತ್ವದಲ್ಲಿ ನೂತನ ಕೋರ್ ಕಮಿಟಿ ಆರಂಭಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ನೂತನ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷರಾಗಿದ್ದು, ವೆಂಕಟರಾವ್ ನಾಡಗೌಡ, ಪ್ರಜ್ವಲ್ ರೇವಣ್ಣ, ಸಿಎಸ್ ಪುಟ್ಟರಾಜು, ಕುಪೇಂದ್ರ ರೆಡ್ಡಿ, ಮೊಹಮ್ಮದ್ ಝುಪ್ರುಲ್ಲಾಖಾನ್, ಎಂ ಕೃಷ್ಣಾರೆಡ್ಡಿ, ರಾಜಾ ವೆಂಕಟ್ಟಪ್ಪನಾಯಕ, ಬಿ ಎಂ ಫಾರೂಕ್, ಕೆ ಎ ತಿಪ್ಪೇಸ್ವಾಮಿ, ವೈಎಸ್ ವಿ ದತ್ತಾ, ಕೆ ಎಂ ತಿಮ್ಮರಾಯಪ್ಪ, ಟಿ ಎ ಶರವಣ, ಶಾರದಾ ಪೂರ್ಯಾನಾಯಕ್, ನಾಸೀರ್ ಭಗವಾನ್, ಹನುಮಂತಪ್ಪ ಬಸಪ್ಪ ಮಾವಿನಮರದ, ರೂತ್ ಮನೋರಮಾ, ಸುಧಾಕರ್ ಎಸ್ ಶೆಟ್ಟಿ, ವಿ ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್ ಅವರನ್ನ ಸದಸ್ಯರನ್ನಾಗಿ ನೇಮಿಸಿದೆ.