ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

suddionenews
1 Min Read

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ ಊರಲ್ಲಿ ಮೂರು ದಿನಗಳ ಕಾಲ ಬಂದ್ ಕೂಡ ನಡೆಸಿದ್ದಾರೆ. ಇದೀಗ ಮಗನ ತಪ್ಪಿನ ಬಗ್ಗೆ ತಂದೆ-ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಫಯಾಜ್ ತಂದೆ – ತಾಯಿ ಇಬ್ಬರು ಶಿಕ್ಷಕ ವೃತ್ತಿಯಲ್ಲಿದ್ದಾರೆ. ಮಗನ ತಪ್ಪಿನ ಬಗ್ಗೆ ಮಾತನಾಡಿದ ಮಮ್ತಾಜ್, ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಮೊದಲು ಓದಿನಲ್ಲಿ ಜಾಣನಿದ್ದ. ಅವಳೇ ಇವನಿಗೆ ಪ್ರಪೋಸ್ ಮಾಡಿದ್ದು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಎಂದಿದ್ದೆ. ಈ ಘಟನೆಯಿಂದ ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಮಗ ಕೆಎಎಸ್ ಆಫೀಸರ್ ಆಗಬೇಕು, ನಟನಾಗಬೇಕು ಎಂದು ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದು ಬಹಳ ಸಂಕಟ ತಂದಿದೆ. ನೇಹಾ ಹಿರೇಮಠ ಕೂಡ ತುಂಬಾ ಒಳ್ಳೆಯ ಹುಡುಗಿಯಾಗಿದ್ದಳು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡುತ್ತೀನಿ. ಇವನಿಗೆ ತಕ್ಕ ಶಿಕ್ಷೆಯಾಗಲಿ ಎಂದಿದ್ದಾರೆ.

ಇನ್ನು ಫಯಾಜ್ ತಂದೆ ಬಾಬಾ ಸಾಹೇಬ್ ಮಾತನಾಡಿ, ಮಗನಿಗೆ ಯಾವ ಶಿಕ್ಷೆ ಕೊಟ್ಟರು ಸ್ವಾಗತಿಸುತ್ತೇನೆ. ಹೆಣ್ಣು ಮಕ್ಕಳೆಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳೆಂದರೆ ದೇವರಂತೆ ಪೂಜಿಸುವ ದೇಶ ನಮ್ಮದು. ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅವರ ಹೋರಾಟಕ್ಕೆ ಜಯವಾಗಲಿ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ಕರ್ನಾಟಕದ ಜನೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *