NEET-2022 result : ಟಾಪ್ 10 ರ‍್ಯಾಂಕ್ ಪಡೆದವರ ಪಟ್ಟಿಯಲ್ಲಿ ಕರ್ನಾಟಕದ ಮೂವರು

Facebook
Twitter
Telegram
WhatsApp

ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) The National Testing Agency (NTA) ಬುಧವಾರ ತಡರಾತ್ರಿ NEET-2022 ಫಲಿತಾಂಶವನ್ನು ಪ್ರಕಟಿಸಿದ್ದು, ಕರ್ನಾಟಕದ ಮೂವರು ವಿದ್ಯಾರ್ಥಿಗಳು ALL INDIA RANKING (AIR) ಪಟ್ಟಿಯಲ್ಲಿ ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ.

ಹೃಷಿಕೇಶ್ ನಾಗಭೂಷಣ ಗಂಗೂಲೆ ಅವರು ಎಐಆರ್ ಪಟ್ಟಿಯಲ್ಲಿ ಕರ್ನಾಟಕದ ಟಾಪರ್ ಮತ್ತು ಹತ್ತರಲ್ಲಿ ಮೂರನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು BNYS (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್) ಮತ್ತು BVSC (ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸಸ್) ಸ್ಟ್ರೀಮ್‌ಗಳಲ್ಲಿ ಜುಲೈನಲ್ಲಿ ಘೋಷಿಸಲಾದ CET ಫಲಿತಾಂಶದಲ್ಲಿಯೂ ಟಾಪರ್ ಆಗಿದ್ದರು.

ನಂತರದ ಸ್ಥಾನದಲ್ಲಿ ರುಚಾ ಪವಾಶೆ ಅವರು ರಾಜ್ಯದ ಎರಡನೇ ಟಾಪರ್ ಮತ್ತು ಎಐಆರ್ ಪಟ್ಟಿಯಲ್ಲಿ 4 ನೇ ಟಾಪರ್ ಆಗಿದ್ದಾರೆ. ಮಹಿಳಾ ವಿಭಾಗದಲ್ಲಿ 2ನೇ AIR ಲಿಸ್ಟ್ ಟಾಪರ್ ಕೂಡ ಆಗಿದ್ದಾರೆ.

ಕೃಷ್ಣ ಎಸ್‌ಆರ್ ಅವರು ಕರ್ನಾಟಕದ 3ನೇ ಟಾಪರ್ ಮತ್ತು ಎಐಆರ್ ಪಟ್ಟಿಯಲ್ಲಿ 8ನೇ ಟಾಪರ್ ಆಗಿದ್ದಾರೆ. ಎಐಆರ್ ಪಟ್ಟಿಯಲ್ಲಿ ಕರ್ನಾಟಕದ ಒಂಬತ್ತು ವಿದ್ಯಾರ್ಥಿಗಳು ಟಾಪ್ 50ರಲ್ಲಿ ಸ್ಥಾನ ಪಡೆದಿದ್ದಾರೆ.

ಈ ವರ್ಷ ಕರ್ನಾಟಕದಿಂದ ಒಟ್ಟು 1,33,255 ವಿದ್ಯಾರ್ಥಿಗಳು NEET-2022 ಗೆ ನೋಂದಾಯಿಸಿಕೊಂಡಿದ್ದರು ಮತ್ತು ಅವರಲ್ಲಿ 1,22,423 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  2022-23ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 72,262 ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳಿಗೆ ಅರ್ಹತೆ ಪಡೆದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರಿನಲ್ಲಿ ಜನತಾದರ್ಶನ ಕಾರ್ಯಕ್ರಮಕ್ಕೆ ಸಚಿವ ಡಿ. ಸುಧಾಕರ್ ಚಾಲನೆ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ

  ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್.25 :  ನಗರದ ತಾಹಾ ಪ್ಯಾಲೇಸ್‌ನಲ್ಲಿ ಸೋಮವಾರ‌ ಜಿಲ್ಲಾ ಉಸ್ತುವಾರಿ ಸಚಿವರಾದ  ಡಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನೆಡಯಿತು. ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್

ಜನತಾ ದರ್ಶನದಲ್ಲಿ ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ..!

  ಕೋಲಾರ: ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಯ ದಿನ. ರಾಜ್ಯಾದ್ಯಂತ ಒಂದೇ ದಿನ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ ತುಂಬಿದ

ನಾಳೆ ಬೆಂಗಳೂರು ಬಂದ್ ಏನಿರುತ್ತೆ..? ಏನಿರಲ್ಲ..?

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ, ನಾಳೆ ಬೆಂಗಳೂರು ಬಂದ್ ಮಾಡಲು ರೈತ ಸಂಘಟನೆ, ಬಿಜೆಪಿ ನಾಯಕರು, ಕನ್ನಡಪರ ಸಂಘಟನೆ, ಜೆಡಿಎಸ್ ನಾಯಕರು ಸೇರಿದಂತೆ ಹಲವು ಸಂಘಟನೆಗಳು ನಿರ್ಧರಿಸಿವೆ. ಈಗಾಗಲೇ ಮಂಡ್ಯ

error: Content is protected !!