ಎಂದಾದರೂ ನೆಲ ಬೇವು ಉಪಯೋಗಿಸಿದ್ದೀರಾ..? ಅದರ ಉಪಯೋಗಗಳು ಇಲ್ಲಿವೆ..!
ಕಾಲಮೇಘದ ವೈಜ್ಞಾನಿಕ ಹೆಸರು ಆಂಡ್ರೋಗ್ರಾಫಿಸ್ ಪನಿಕ್ಯುಲಾಟಾ ಅಂತ. ನಿರ್ಧಿಷ್ಟ ಋತುವಿನಲ್ಲಿ ಬೆಳೆಯುವ ಕಾಲಮೇಘ ಮೂಲಿಕೆಗೆ ಭಾರತದ ಮತ್ತು ಶ್ರೀಲಂಕಾ ತವರೂರು.
ಶೀತ, ಜ್ವರ, ಮಧುಮೇಹ, ಅಧಿಕ ರಕ್ತದೊತ್ತಡ, ಹುಣ್ಣು, ಶ್ವಾಸನಾಳಗಳ ಉರಿಯೂತ, ಚರ್ಮ ರೋಗಗಳು, ಆಮಶಂಕೆ, ಮತ್ತು ಮಲೇರಿಯಾಗಳಂತಹ ಖಾಯಿಲೆಗಳಿಗೆ ಬಳಕೆ ಮಾಡಲಾಗುತ್ತೆ.
ನೆಗಡಿ ಬೇಗ ನಿವಾರಣೆಯಾಗಬೇಕಾದ್ರೆ ಈ ಮೂಲಿಕೆಯನ್ನು ಕುದಿಸಿ ಸೇವಿಸಿರಿ.. ಆಗ ಕೆಮ್ಮು ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.
ಈ ಗಿಡಮೂಲಿಕೆ ಸಂಧಿವಾತವನ್ನು ಉಪಶಮನಗೊಳಿಸುತ್ತದೆ. ಕೆಲವರಿಗೆ ಮೊಣಕಾಲಿನಲ್ಲಿ ಸಾಧಾರಣದಿಂದ ತುಸು ಹೆಚ್ಚೇ ಅನ್ನಿಸುವುದರ ಮಟ್ಟಿಗೆ ನೋವು ಮತ್ತು ಸೆಳೆತ ಇರುತ್ತದೆ. ಅಂತಹವರು ಈ ಆಂಡ್ರೋಗ್ರಾಫಿಸ್ ನ ಸಾರವನ್ನ ಪ್ರತಿದಿನ ತೆಗೆದುಕೊಳ್ಳುತ್ತಾ ಬಂದಲ್ಲಿ ಅವರ ಮೊಣಕಾಲಿನ ನೋವು ಮತ್ತು ಸೆಳೆತ ಬಹಳಷ್ಟು ಕಡಿಮೆಯಾಗುತ್ತದೆ.
ಆಂಟಿ-ಆಕ್ಸಿಡೆಂಟ್ ಗಳಿಗಾಗಿ ಎಲ್ಲೆಲ್ಲೋ ಹುಡುಕಾಡೋದು ಬೇಕಿಲ್ಲ
ಕಾಲಮೇಘದಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಮತ್ತು ಫ಼ಾಲಿಫ಼ೆನಾಲ್ ಗಳು ಅಗಾಧವಾಗಿವೆ. ನಮ್ಮ ದೇಹದಲ್ಲಿರೋ ಹಾನಿಕಾರಕ ಮುಕ್ತ ರಾಡಿಕಲ್ ಗಳ ವಿರುದ್ಧ ಸೆಣಸುವುದೇ ಇವುಗಳ ಕೆಲಸ. ಹೀಗಾದಾಗ, ನಮ್ಮ ಶರೀರದ ಜೀವಕೋಶಗಳು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಾಣುಗಳಿಂದ ರಕ್ಷಿಸಲ್ಪಡುತ್ತವೆ.