Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಕನ್ನಡ ಭನವ ನಿರ್ಮಾಣಕ್ಕೆ ಅಗತ್ಯ ನೆರವು : ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಭರವಸೆ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ : ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭನವ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಿಕೊಡುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ಭರವಸೆ ನೀಡಿದ್ದಾರೆ.

ತಳಕು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಯವರ ಮನವಿ ಸ್ವೀಕರಿಸಿ ಮಾತನಾಡಿದರು.

ನೆರೆಯ ಜಿಲ್ಲೆಗಳಲ್ಲಿ ಕನ್ನಡ ಭವನಗಳಿವೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನವಿಲ್ಲ. ಈ ಬಗ್ಗೆ ಮುಂದಿನ ಜಿಲ್ಲಾ ಸಭೆಗಳಲ್ಲಿ ಚರ್ಚೆ ನಡೆಸಲಾಗುವುದು. ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಸಚಿವರ ಜತೆಗೆ ಚರ್ಚೆ ನಡೆಸಲಾಗುವುದು. ನಂತರ ಇದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕನ್ನಡ ಭವನಕ್ಕೆ ಅಗತ್ಯವಾದ ವಿಶಾಲ ನಿವೇಶನವಿದೆ. ನಗರದ ಪಿಳ್ಳೇಕೇರನಹಳ್ಳಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿವೇಶನ ಕಸಾಪ ಹೆಸರಿನಲ್ಲಿದೆ. ಜಿಲ್ಲಾಧಿಕಾರಿಗಳು ಹಾಗೂ ಕಸಾಪ ಜಿಲ್ಲಾಧ್ಯಕ್ಷರ ಜಂಟಿ ಖಾತೆಯಲ್ಲಿ 20 ಲಕ್ಷ ರೂಗಳ ಹಣವಿದೆ. ಸುಮಾರು 2 ಕೋಟಿ ವೆಚ್ಚದ ಕನ್ನಡ ಭವನದ ಉದ್ದೇಶವನ್ನು ಕಸಾಪ ಹೊಂದಿದೆ. ಸರಕಾರದ ನಿಧಿ, ಸಂಸದರು, ಶಾಸಕರು ತಮ್ಮ ಅನುದಾನವನ್ನು ಉದಾರವಾಗಿ ಒದಗಿಸಬೇಕು ಎಂದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹಾಪ್ ಕಾಮ್ಸ್ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಮುಖಂಡ ಶಿವಣ್ಣ ಮತ್ತಿತರರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಾಪತ್ತೆಯಾಗಿದ್ದ ಆರೋಪಿ ಚಿತ್ರದುರ್ಗದಲ್ಲಿ ಪೊಲೀಸರಿಗೆ ಸರಂಡರ್….!

  ಸುದ್ದಿಒನ್, ಚಿತ್ರದುರ್ಗ, ಜೂ.13 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿ ಬೆಂಡೆತ್ತುತ್ತಿದ್ದಾರೆ.  ಕೊಲೆ ಮಾಡಿದ ಸ್ಥಳ, ಕೊಲೆ‌ ಮಾಡಿದ್ದು ಹೇಗೆ ಎಂಬೆಲ್ಲಾ ವಿಚಾರಗಳನ್ನು ಈಗಾಗಲೇ

ದರ್ಶನ್ ಕೇಸಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿದ್ರಾ..?

ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ‌ ಮಾಡಲಾಗಿದೆ. ಇದೇ ಕೊಲೆಯ ಕೇಸಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ.

ಸಾರ್ವಜನಿಕರು ಕಾಲಕಾಲಕ್ಕೆ ಮೂಳೆ ಸಾಂದ್ರತೆ ರೋಗಕ್ಕೆ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ : ಡಾ.ವೆಂಕಟೇಶ್ 

  ಸುದ್ದಿಒನ್, ಚಳ್ಳಕೆರೆ, ಜೂ.13 : ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಜೀವನಶೈಲಿ ಬದಲಾವಣೆ ಕಾಣುತ್ತಿದ್ದು ವೇಗದ ಬದುಕಿನಿಂದ ತಮ್ಮ ಆರೋಗ್ಯದ ಕಡೆ ಗಮನಹರಿಸದೆ ನಿರ್ಲಕ್ಷ ವಹಿಸುತ್ತಿರುವುದರಿಂದ ಕೀಲು ಮೂಳೆ ರೋಗಗಳಿಗೆ ತುತ್ತಾಗುತ್ತಿದ್ದು ಸಾರ್ವಜನಿಕರು ಆರೋಗ್ಯದ

error: Content is protected !!