ಕಾಯಕ ಸಮುದಾಯ ಬಿ.ಎನ್.ಚಂದ್ರಪ್ಪ, ಪ್ರಭಾ ಮಲ್ಲಿಕಾರ್ಜನ್ ರವರನ್ನು ಬೆಂಬಲಿಸಲಿ : ಎನ್.ಡಿ.ಕುಮಾರ್ ಮನವಿ

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ.25 : ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎನ್.ಚಂದ್ರಪ್ಪ, ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜನ್ ಅವರನ್ನು ಗೆಲ್ಲಿಸಲು ಕಾಯಕ ಸಮುದಾಯ ಮುಂದಾಗಬೇಕು ಎಂದು ನಗರ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮನವಿ ಮಾಡಿದರು.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ನೊಂದ ಸಮಾಜಗಳ ಪರವಾಗಿ ಕಾಂಗ್ರೆಸ್ ಪಕ್ಷ ಬಿಟ್ಟರೆ, ಬೇರೆ ಯಾವುದೇ ಪಕ್ಷಗಳು ಯೋಜನೆಗಳನ್ನು ನೀಡಿಲ್ಲ. ಸವಿತಾ ಸಮಾಜ, ಮಡಿವಾಳ, ಯಾದವ, ಈಡಿಗ, ನೇಕಾರ ವಿಶ್ವಕರ್ಮ, ಗಾಣಿಗ, ಉಪ್ಪಾರ ಹೀಗೆ ಅನೇಕ ಸಮಾಜಗಳಿಗೆ ಸಮಾಜದ ಮಹಾಪುರುಷರ ಜಯಂತಿ, ನಿಗಮ ಸ್ಥಾಪನೆ, ನಿಗಮ ಮಂಡಳಿಗಳಲ್ಲಿ ಸ್ಥಾನ ಸೇರಿದಂತೆ ರಾಜಕೀಯವಾಗಿ ಸ್ಥಾನಮಾನ ನೀಡಿದೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್ ಎಂದರು.

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೊಂದ ಸಮಾಜಗಳಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಆದ್ದರಿಂದ ಹಿಂದುಳಿದ ಸಮುದಾಯಗಳನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಗ್ಯಾರಂಟಿ ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ. ಶೋಷಿತರ ಪರವಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ ಎಂದರು.

 

ಇಂದು ಚಿತ್ರದುರ್ಗ ನಗರದ ನಾಲ್ಕನೇ ವಾರ್ಡಿನಲ್ಲಿ ಚಿತ್ರದುರ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎನ್ ಡಿ ಕುಮಾರ್ ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ಸಿಟಿ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ಎನ್ ಚಂದ್ರಪ್ಪನವರ ಪರ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಮೈಲಾರಪ್ಪ, ಲಿಂಗರಾಜು, ಗಿರೀಶ,ಸತೀಶ್ ಹಾಗೂ ಇನ್ನೂ ಅನೇಕ ಮಂದಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *