ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 16 : ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮ ಪ್ರತಿಷ್ಠಾಪನಾ ಸಮಿತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರ ಮಟ್ಟದ ಡ್ರಾಯಿಂಗ್ ಕಾಂಪಿಟೇಷನ್‍ನಲ್ಲಿ ಚಿತ್ರದುರ್ಗದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಎಂ.ನಯನಶ್ರಿ ಎರಡನೆ ಸ್ಥಾನ ಗಳಿಸಿ ರಾಜ್ಯ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಡ್ರಾಯಿಂಗ್ ಕಾಂಪಿಟೇಷ್‍ನ್‍ನಲ್ಲಿ ಎರಡನೆ ಸ್ಥಾನ ಗಳಿಸಿ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪಡೆದಿರುವ ಎಂ.ನಯನಶ್ರಿಗೆ ಅಭಿನಂದಿಸಿ ಇದೊಂದು ಅಪ್ರತಿಮ ಸಾಧನೆ ಎಂದು ಬಾಲಕಿಯಲ್ಲಿರುವ ಪ್ರತಿಭೆಯನ್ನು ಬಣ್ಣಿಸಿದ್ದಾರೆ.


