ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮಾರ್ಚ್.30) : ಪೌರಾಡಳಿತ ನಿರ್ದೇಶನಾಲಯ ಆದೇಶದಂತೆ ಕರ್ನಾಟಕ ಸ್ಟಾಂಪ್‍ಗಳ ಅಧಿನಿಯಮ 1957ರ 45 ಬಿ ಪ್ರಕರಣದಡಿಯಲ್ಲಿ ಪ್ರಕಟಿಸಲಾಗುವ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಗಳ ಆಧಾರದ ಮೇರೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಾಗಿರುತ್ತದೆ.
2023-24ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರ ಸೂಚಿಗಳು ಪರಿಷ್ಕರಣೆ ಆಗದಿದ್ದಲ್ಲಿ ಶೇ.3 ರಿಂದ ಶೇ.5ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡುವ ಹಾಗೂ ಸ್ಥಳೀಯ ಸಂಸ್ಥೆಗಳು ನೀರಿನ ದರವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಬಾರಿ ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ 2023ರ ಮಾರ್ಚ್ 20ರಂದು ನಡೆದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳ ಸಭೆಯಲ್ಲಿ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಗಳನ್ನು 2023-24ನೇ ಸಾಲಿಗೆ ಪರಿಷ್ಕರಣೆಯಾಗದಿರುವ ಕಾರಣ 2018-19ನೇ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯನ್ನು ಚಾಲ್ತಿ ಸಾಲಿನ ಮಾರ್ಗಸೂಚಿ ಬಲೆ ಎಂದು ಉಪನೊಂದಣಾಧಿಕಾರಿಗಳು ದೃಢೀಕರಿಸಿರುವುದನ್ನು ಪರಿಗಣಿಸಲಾಗಿರುತ್ತದೆ.
2018-19 ನೇ ಸಾಲಿನ ಮಾರ್ಗಸೂಚಿ ಬೆಲೆ ಆಧಾರದಲ್ಲಿ ನಿವೇಶನಗಳ ಮಾರ್ಗಸೂಚಿ ಬೆಲೆಗಳು ಕಟ್ಟಡ ನಿರ್ಮಾಣದ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳಿಗೆ 2023-24 ನೇ ಅವಧಿಗೆ ಶೇ. 3 ರಿಂದ ಶೇ.5ರ ಮಿತಿಯಲ್ಲಿ, ನಿವೇಶನ ಶೇ.3, ವಸತಿ ಶೇ.3, ವಾಣಿಜ್ಯ ಶೇ.4, ವಾಣಿಜ್ಯೇತರ ಶೇ.3 ಹಾಗೂ ಕೈಗಾರಿಕೆ ಶೇ.3.5 ದರಗಳನ್ನು ನಿಗಧಿಪಡಿಸಲು ಹಾಗೂ ಸರ್ಕಾರದ ಆದೇಶದನ್ವಯ ನೀರಿನ ದರವನ್ನು ಪ್ರತಿ 3 ವರ್ಷಗಳಿಗೊಮ್ಮೆ ಒಂದು ಬಾರಿ ಪರಿಷ್ಕರಣೆಯಂತೆ 2020-21ನೇ ಸಾಲಿನಲ್ಲಿ ನಿಗಧಿಪಡಿಸಿದ ನೀರಿನ ತೆರಿಗೆಯ ದರದ ಮೇಲೆ ವಸತಿ ವಾಣಿಜ್ಯ ಕೈಗಾರಿಕೆಗಳ ನೀರಿನ ತೆರಿಗೆ ಮೇಲೆ ಶೇ.3 ರಷ್ಟು ನಿಗಧಿಪಡಿಸಲು ಸಭೆಯಲ್ಲಿ ತೀರ್ಮಾನಿಸಿದಂತೆ 2023ರ ಏಪ್ರಿಲ್ 1 ರಿಂದ ಜಾರಿಗೆ ತರಲಾಗುವುದು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್. ಭಾಗ್ಯಮ್ಮ ತಿಳಿಸಿದ್ದಾರೆ.