ನಾಯಕನಹಟ್ಟಿ | ದೊರೆಗಳಹಟ್ಟಿಯಲ್ಲಿ ಅದ್ದೂರಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ನಾಯಕನಹಟ್ಟಿ, ಫೆಬ್ರವರಿ.06 : ನೆಲಗೇತನಹಟ್ಟಿ ಗ್ರಾ.ಪಂ. ವ್ಯಾಪ್ತಿಯ ದೊರೆಗಳಹಟ್ಟಿಯಲ್ಲಿ ಮಂಗಳವಾರ ಶ್ರೀ ಚೌಡೇಶ್ವರಿ ದೇವಿ ಜಾತ್ರೋತ್ಸವ ಸಂಭ್ರಮ ಸಡಗರದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಗಿತು.

ಗ್ರಾ. ಪಂ. ಸದಸ್ಯ ಬಂಗಾರಪ್ಪ ಮಾತನಾಡಿ ನಮ್ಮ ದೊರೆಗಳಹಟ್ಟಿ ಹಿಂದೆ ಪಾಳೇಗಾರರು ಆಳ್ವಿಕೆ ಮಾಡಿದಂತಹ ಗ್ರಾಮ ಗ್ರಾಮದಲ್ಲಿ ಶ್ರೀ  ಚೌಡೇಶ್ವರಿ ದೇವಿ ಹಲವು ಪವಾಡಗಳ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ ಇನ್ನೂ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಪ್ರತಿ ವರ್ಷವೂ ಆಚರಣೆ ಮಾಡುತ್ತಾ ಬಂದಿದ್ದಾರೆ.
ಬುಡಕಟ್ಟು ಸಂಸ್ಕೃತಿ ಗ್ರಾಮದಲ್ಲಿ ಇಂದಿಗೂ  ಅನಾವರಣಗೊಳ್ಳಲಿದೆ ಎಂದರು.

ಪಿ. ಟಿ. ಕಾರ್ತಿಕ್ ಪಾಳೆಗಾರ್ ಮಾತನಾಡಿ ಪೂರ್ವಜರ ಕಾಲದಿಂದಲೂ ಇಲ್ಲಿ ಬುಡಕಟ್ಟು ಸಂಸ್ಕೃತಿಯ ಆಚಾರ-ವಿಚಾರಗಳು ಇನ್ನೂ ಜೀವಂತವಾಗಿರಲು ಶ್ರೀ ಚೌಡೇಶ್ವರಿ ದೇವಿ ಕಾರಣ ಪ್ರತಿ ವರ್ಷವೂ ನಮ್ಮ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಅಗ್ನಿ ಕೆಂಡೋತ್ಸವ ನಡೆಯುತ್ತದೆ, ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಈ ಒಂದು ಜಾತ್ರೆಯಲ್ಲಿ ಆಗಮಿಸಿರುವುದು ತುಂಬಾ ಸಂತೋಷದ ವಿಷಯ ಶ್ರೀ ಚೌಡೇಶ್ವರಿ ದೇವಿ ಆಶೀರ್ವಾದ ಸದಾ ಈ ಗ್ರಾಮದ ಜನರ ಮೇಲೆ ಮತ್ತು ಸುತ್ತಮುತ್ತಲ ಹಳ್ಳಿಯ ಜನರ ಮೇಲೆ ಇರಲಿ ಎಂದು ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬಂಗಾರಯ್ಯ, ಕೆ ಬಿ ಬೋಸಯ್ಯ, ಡಿ. ಬಿ. ಬೋರಯ್ಯ, ಚಂದ್ರಶೇಖರ್, ಪಿ ಟಿ ರುದ್ರಮುನಿ, ನಿರಂಜನ್ ಮೂರ್ತಿ ,ಪಿ ಎಚ್ ತಿಪ್ಪೇಸ್ವಾಮಿ, ಆರ್ ಎಸ್ ರವೀಂದ್ರ, ವೈ ಒ. ಮಂಜುನಾಥ್ (ಗೂಳಿ), ವೈ ಬಿ ತಿಪ್ಪೇಸ್ವಾಮಿ, ಮಣಿಕಂಠ, ರಂಗಸ್ವಾಮಿನಾಯಕ, ಚಿನ್ನಬೋಸಯ್ಯ, ವೈ ಸಿ ಮಂಜುನಾಥ್, ದೊರೆ ಬಸವರಾಜ್ ನಾಯಕ, ಬಿ ಶ್ರೀಧರ್ ,ಪೂಜಾರಿ ಮಲ್ಲಿಕಾರ್ಜುನ್, ಗೋಪಾಲಸ್ವಾಮಿ, ಮನೋಜ್ ಸೇರಿದಂತೆ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಇದ್ದರು

Share This Article
Leave a Comment

Leave a Reply

Your email address will not be published. Required fields are marked *