ಚಿತ್ರದುರ್ಗ,(ನ.29): ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 01ರಂದು ಮಧ್ಯಾಹ್ನ 1 ಗಂಟೆಯಿಂದ ಹಿರೇಕೆರೆಯಲ್ಲಿ “ಶ್ರೀ ಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ” ನಡೆಯಲಿದೆ.
ಅಂದು ಸಂಜೆ 6 ಗಂಟೆಯಿಂದ ಒಳಮಠ, ಹೊರಮಠ ಮತ್ತು ಏಕಾಂತಸ್ವಾಮಿ ಮಠ ಹಾಗೂ ಶ್ರೀ ಈಶ್ವರ ದೇವಸ್ಥಾನ ಒಳಗೊಂಡಂತೆ “ಲಕ್ಷ ದೀಪೋತ್ಸವ ಕಾರ್ಯಕ್ರಮ” ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ “ಬೆಳ್ಳಿ ರಥೋತ್ಸವ” ನಡೆಯಲಿದೆ.
ಡಿಸೆಂಬರ್ 02ರಂದು ದೊಡ್ಡ ಕಾರ್ತಿಕೋತ್ಸವ (ಏಕಾಂತೇಶ್ವರ ಸ್ವಾಮಿ ಕಾರ್ತಿಕೋತ್ಸವ) ನಡೆಯಲಿದೆ. ಡಿಸೆಂಬರ್ 16ರಂದು ಧನುರ್ಮಾಸ ಪೂಜಾ ಪ್ರಾರಂಭ, ತ್ರಿಕಾಲ ಪೂಜೆ, 2023ರ ಜನವರಿ 14ರಂದು ಉತ್ತರಾಯಣ ಪುಣ್ಯಕಾಲ ಧನುರ್ಮಾಸ ಪೂಜೆ ಮುಕ್ತಾಯವಾಗಲಿದೆ.
ವಿಶೇಷ ಆಹ್ವಾನಿತರಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕರಾದ ಟಿ.ರಘುಮೂರ್ತಿ, ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಸೇರಿದಂತೆ ನಾಯಕನಟ್ಟಿ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ನೇತೃತ್ವದಲ್ಲಿ ಕಾರ್ತಿಕೋತ್ಸವ, ತೆಪ್ಪೋತ್ಸವ ಮತ್ತು ಲಕ್ಷ ದೀಪೋತ್ಸವಗಳ ಹಾಗೂ ಬೆಳ್ಳಿ ರಥೋತ್ಸವಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.