ಚಿಕ್ಕಮಗಳೂರು: ರಾಜ್ಯವನ್ನು ನಕ್ಸಲ್ ಮುಕ್ತ ಮಾಡುವತ್ತ ಸರ್ಕಾರ ಗಮನ ಹರಿಸಿದೆ. ಈ ಮೂಲಕ ಉಳಿದ ಆರು ಜನ ನಕ್ಸಲರ ಮನವೊಲಿಸುವ ಕಾರ್ಯ ಯಶಸ್ವಿಯಾಗಿದೆ. ಇಂದು ಆರು ಜನ ನಕ್ಸಲರು ಶರಣಾಗಲು ಜಿಲ್ಲಾಡಳಿತದ ಮುಂದೆ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶರಣಾಗುತ್ತಿರುವ ನಕ್ಸಲರಿಗೆ ಸರ್ಕಾರದಿಂದ ಭರವಸೆಯನ್ನು ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಹೋರಾಟಗಾರ್ತಿ ಬಿ ಲಲಿತಾ ನಾಯ್ಕ್, ಆತ್ಮಘನತೆ ಎಲ್ಲರಿಗೂ ಬಹಳ ಮುಖ್ಯ.ಒಂದು ಆತ್ಮವಿಶ್ವಾಸ ಇಟ್ಟುಕೊಂಡು ಇಂದು ಮುಖ್ಯವಾಹಿನಿಗೆ ಬರ್ತಾ ಇದಾರೆ. ಸರ್ಕಾರ ಕೂಡ ರಾಜ್ಯದಲ್ಲಿ ಇಂಥ ಚಟುವಟಿಕೆಗಳು ಆಗವಾರದು. ಕ್ರೌರ್ಯ, ಹಿಂಸೆ, ಬಂದೂಕಿನ ಸದ್ದುಗಳು ಕೇಳಬಾರದು ಅಂತ ಈ ರೀತಿಯ ಕೆಲಸಕ್ಕೆ ಕೈ ಹಾಕಿದೆ.
ಸಿದ್ದರಾಮಯ್ಯ ಅವರಂಥ ಮುಖ್ಯಮಂತ್ರಿ ಇರುವುದರಿಂದ ಇದು ಸಾಧ್ಯವಾಗಿದೆ. ಯಾಕಂದ್ರೆ ಅದೇ ರೀತಿಯ ಭಾವನೆ ಇಲ್ಲದೆ ಇದ್ದರೆ ಕೆಲವೊಬ್ಬರು ಹಿಂಜರಿಯುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೂ ಹೋರಾಟದ ಮನಸ್ಥತಿ, ರಾಜ್ಯವನ್ನ ಸುಭದ್ರವಾಗಿಡುವ ಮನಸ್ಥಿತಿ ಇರುವ ಕಾರಣಕ್ಕೆ ಅವರು ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಅವರನ್ನು ಹೊರಗೆ ಕರೆದುಕೊಂಡು ಬಂದ ಮೇಲು ಸವಾಲಿದೆ. ಯಾಕಂದ್ರೆ ಅವರ ಮೇಲೆ ನೂರಾರು ಕೇಸುಗಳು ಇರುತ್ತವೆ. ಅವರನ್ನ ಹೇಗೆ ಬಿಡಿಸಿಕೊಳ್ಳಬೇಕು, ಅವರಿಗೆ ಹೇಗೆ ಬದುಕನ್ನು ಕೊಡಬೇಕು ಎಂಬುದೇ ದಿಡ್ಡ ಕಷ್ಟದ ಕೆಲಸ. ಆದರೂ ಕೂಡ ಅದನ್ನ ಮಾಡುವುದಕ್ಕೆ ಮುಂದಾಗಿದೆ. ಕೋಟ್ಯಾಂತರ ಜನರನ್ನ ಸುಧಾರಣೆ ಮಾಡುತ್ತಿರುವ ಸರ್ಕಾರಕ್ಕೆ ಆರು ಜನ ಬದುಕನ್ನ ಸುಧಾರಿಸುವುದಕ್ಕೆ ಕಷ್ಟವೇನು ಅಲ್ಲ. ಆದ್ದರಿಂದ ಸರ್ಕಾರ ಬದುಕು ಕೊಡುವುದಕ್ಕೆ ಒಪ್ಪಿಕೊಂಡಿದೆ. ನಮಗೇನು ಬೇಕು ಶಾಂತಿ ಬೇಕು. ಸರ್ಕಾರ ಹಾಗೂ ನಕ್ಸಲೇಟ್ ನಡುವಿನ ಅಮನತರ ದೂರ ಮಾಡಿ, ಹಿಂಸೆಯನ್ನು ಕಡಿಮೆ ಮಾಡಿ, ಅಗಿಂಸಾ ರೀತಿ ಬದುಕುವಂತೆ ಮಾಡಬೇಕಿದೆ ಎಂದಿದ್ದಾರೆ.