ಮುಂಬೈ: ಡ್ರಗ್ಸ್ ಕೇಸ್ ನಲ್ಲಿ ಶಾರೂಖ್ ಪುತ್ರ ಆರ್ಯನ್ ಖಾನ್ ಒಂದಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆ ಬಳಿಕ ಜಾಮೀನಿನ ಮೇಲೆ ಹೊರಗೆ ಕರೆತರಲಾಗಿತ್ತು. ಇದೀಗ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಆರ್ಯನ್ ಖಾನ್ ನನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಹೇಳಿದ್ದಾರೆ. ಕಳೆದ ಬಾರಿ ಎನ್ ಸಿ ಬಿ ನೇತೃತ್ವದಲ್ಲಿ ಹಡಗಿನ ಮೇಲೆ ದಾಳಿ ಮಾಡಲಾಗಿತ್ತು. ಡ್ರಗ್ಸ್ ಕೇಸ್ ನಲ್ಲಿ ಹುಡುಗನೊಬ್ಬನ ಬಂಧನವಾಗಿತ್ತು. ಆತನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದ್ರೆ ಶಾರೂಖ್ ಪುತ್ರ ಆರ್ಯನ್ ಅವರನ್ನು ಇದರಲ್ಲಿ ಸೇರಿಸಿ ಶಾರೂಖ್ ಅವರಿಗೆ ಸಮೀರ್ ಮತ್ತು ಬಿಜೆಪಿ ಮುಖಂಡ ಮೋಹಿತ್ ಅವರು ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ.
ಆರ್ಯನ್ ಕೇಸ್ ನೋಡಿಕೊಳ್ಳುತ್ತಿದ್ದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳು ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಸಮೀರ್ ಆರ್ಯನ್ ಅವರನ್ನು ಅಪಹರಿಸಿಬೇಕೆಂದು ಈ ಆರೋಪ ಅವರ ಮೇಲೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನವಾಬ್ ಮಾಡಿದ್ದಾರೆ.