ಸುದ್ದಿಒನ್ : ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ಬೇರ್ಪಟ್ಟಿದ್ದವು. ಅಂದಿನಿಂದ ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಗಂಭೀರ ಉದ್ವಿಗ್ನತೆ ಮತ್ತು ಘರ್ಷಣೆಗಳು ನಡೆಯುತ್ತಿವೆ. ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಪ್ರತ್ಯೇಕತಾವಾದದೊಂದಿಗೆ ಮತ್ತು ಭಯೋತ್ಪಾದಕರೊಂದಿಗೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ದೇಶ ವಿಭಜನೆಯಾದ ನಂತರ ಹಲವು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಸಮೀಪದ ಕಾಶ್ಮೀರ ಕಣಿವೆಯಲ್ಲಿರುವ ಕಾಶ್ಮೀರ ಶಕ್ತಿ ಪೀಠದಲ್ಲಿ ಸ್ವಾತಂತ್ರ್ಯಾ ನಂತರ ಪ್ರಥಮ ಬಾರಿಗೆ ಶಾರದಾ ನವರಾತ್ರಿ ಆಚರಣೆ ನಡೆಯುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕುಪ್ವಾರ ಜಿಲ್ಲೆಯ ತಿಟ್ವಾಲ್ ಗ್ರಾಮದಲ್ಲಿ ಶಾರದ ಮಾತಾ ದೇವಾಲಯವಿದೆ. ಸ್ಥಳೀಯ ವರದಿಗಳ ಪ್ರಕಾರ, ಸ್ವಾತಂತ್ರ್ಯ ನಂತರ ಈ ಶಾರದಾ ಮಾತೆಯ ದೇವಸ್ಥಾನದಲ್ಲಿ ನವರಾತ್ರಿ ಪೂಜೆಗಳು ನಡೆದಿಲ್ಲ. ಆದರೆ ಈ ಬಾರಿ ಅಲ್ಲಿ ಶಾರದಾ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಆದರೆ ಈ ಶಾರದಾ ಮಾತೆಯ ದೇವಾಲಯವು ಶತಮಾನಗಳ ಹಿಂದಿನದು ಎಂದು ಹೇಳಲಾಗುತ್ತಿದೆ. ಈ ಶಾರದ ದೇವಸ್ಥಾನವನ್ನು ದೇಶದ 18 ಮಹಾ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರ ಕಣಿವೆಯಲ್ಲಿ ಸ್ವಲ್ಪ ಶಾಂತಿಯುತ ವಾತಾವರಣವಿದೆ. ಈ ನಿಟ್ಟಿನಲ್ಲಿ, ಕಾಶ್ಮೀರದಲ್ಲಿ ಪ್ರವಾಸೋದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕುಪ್ವಾರದಲ್ಲಿರುವ ಈ ಶಾರದಾ ಮಾತಾ ದೇವಸ್ಥಾನಕ್ಕೆ
ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಸ್ಥಳೀಯರದ್ದು. ಈ ಶಾರದಾಮಾತಾ ದೇವಾಲಯವನ್ನು ಮೊದಲ ಶತಮಾನದಲ್ಲಿ ಕುಶಾನ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಪುರಾತತ್ತ್ವಜ್ಞರು ಹೇಳುತ್ತಾರೆ. ಇಲ್ಲಿ ಇನ್ನೂ ಅನೇಕ ದೇವಾಲಯಗಳು ಪಾಳು ಬಿದ್ದಿವೆ. ಕೇಂದ್ರ ಸರ್ಕಾರವು ಕಾಶ್ಮೀರವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸುವ ಮತ್ತು ದೇವಾಲಯಗಳ ಜೀರ್ಣೋದ್ಧಾರದ ಕೆಲಸವನ್ನು ಮಾಡುತ್ತಿದೆ.