ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, ಆ.21: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಈಚೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಬಾಲಕಿಯರಿಗೆ ವೈಜ್ಞಾನಿಕ ಅರಿವು ಮತ್ತು ವೈಜ್ಞಾನಿಕ ಸಬಲೀಕರಣ ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಲಯದ ಬಾಲಕಿಯರಿಗೆ ವೈಜ್ಞಾನಿಕ ಸಲಕರಣೆಗಳ ಕಿಟ್ ವಿತರಿಸಲಾಯಿತು.
ಬಾಲಕಿಯರಿಗೆ ವೈಜ್ಞಾನಿಕ ಅರಿವು ಮೂಡಿಸುವ ಮತ್ತು ವೈಜ್ಞಾನಿಕವಾಗಿ ಲಿಂಗ ತಾರತಮ್ಯ ತೊಡೆದು ಹಾಕುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ನವೋದಯ ವಿದ್ಯಾಲಯದ 50 ಬಾಲಕಿರಿಗೆ ವೈಜ್ಞಾನಿಕ ಸಲಕರಣೆಗಳ ಕಿಟ್‍ನ್ನು ವಿದ್ಯಾಲಯದ ಪ್ರಾಂಶುಪಾಲ ಡ್ಯಾನಿಯಲ್ ರೇತನ್ ಕುಮಾರ ವಿತರಿಸಿದರು.
“ಬಾಲಕಿಯರ ವೈಜ್ಞಾನಿಕ ಮನೋಭಾವ ಸದೃಡಗೊಳಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಬಾಲಕಿಯರು ಈ ವೈಜ್ಞಾನಿಕ ಸಲಕರಣೆ ಬಳಸಿಕೊಂಡು ಚಟುವಟಿಕೆಗಳ ಮೂಲಕ ಕಲಿಯುತ್ತಾರೆ. ಈ ವೈಜ್ಞಾನಿಕ ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಇದರಿಂದ ನಿಮ್ಮ ವೈಜ್ಞಾನಿಕ ಮನೋಭಾವ ಮತ್ತು ಕ್ರಿಯಾಶಿಲತೆ ಹೆಚ್ಚಾಗುತ್ತದೆ ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲ ಡ್ಯಾನಿಯಲ್ ರೇತನ್ ಕುಮಾರ ತಿಳಿಸಿದರು.
ವಿಜ್ಞಾನಜೋತಿ ಕಾರ್ಯಕ್ರಮದ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.