ಹಾವೇರಿ: ರಷ್ಯಾ ಮತ್ತು ಉಕ್ರೇನ್ ದಾಳಿಯಿಂದಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದ ನವೀನ್ ರಷ್ಯಾ ದಾಳಿಗೆ ಸಾವನ್ನಪ್ಪಿದ್ದರು. ಕಳೆದ 20 ದಿನಗಳಿಂದ ಯುದ್ಧ ನಡೆಯುತ್ತಿದ್ದ ಕಾರಣ ಮೃತದೇಹ ತರಲು ಸಾಧ್ಯವಾಗಿಲ್ಲ. ಆದ್ರೆ ಸರ್ಕಾರ ಕೊಟ್ಟ ಮಾತಂತೆ ನಡೆದುಕೊಂಡಿದೆ.
ಇಂದು ಚಳಗೇರಿಗೆ ನವೀನ್ ಮೃತದೇಹ ತಲುಪಿದೆ. ಬೆಳಗ್ಗೆಯೇ ಮೃತದೇಹ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನವೀನ್ ಮೃತದೇಹ ನೋಡಿ ತಂದೆ ತಾಯಿ, ಸಹೋದರ ಕಣ್ಣೀರಲ್ಲೇ ಮುಳುಗಿದ್ದಾರೆ.
ನವೀನ್ ಮೃತದೇಹ ಬಂದ ಕೂಡಲೇ ಚಳಗೇರಿಗೆ ಸಿಎಂ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಮೃತದೇಹದ ಅಂತಿಮ ದರ್ಶನ ಪಡೆದಿದ್ದಾರೆ, ಸಿಎಂ ಬೊಮ್ಮಾಯಿ ಅವರು.
ಇನ್ನು ಮಧ್ಯಾಹ್ನ 3 ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಿದ್ದಾರೆ. ಚಳಗೇರಿ ಬಸ್ ನಿಲ್ದಾಣದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ಮೆಡಿಕಲ್ ಕಾಲೇಜಿಗೆ ನವೀನ್ ದೇಹವನ್ನ ಕುಟುಂಬಸ್ಥರು ದಾನ ಮಾಡಲಿದ್ದಾರೆ. ಕಳೆದ 20 ದಿನದಿಂದ ಹಿಡಿದಿಟ್ಟುಕೊಂಡಿದ್ದ ನೋವಿನ ಕಟ್ಟೆ ಹೊಡೆದಿದೆ. ಆದರೆ ಸಾವಿನಲ್ಲೂ ವಿದ್ಯಾರ್ಥಿಗಳಿಗಾಗಿ ದೇಹದಾನಮಾಡಿದ್ದಾರೆ. ಮಗ ಕೂಡ ಇದೇ ರೀತಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಹೀಗಾಗಿ ಪ್ರಾಕ್ಟಿಕಲ್ ಬಗ್ಗೆ ಎಲ್ಲಾ ಹೇಳಿಕೊಂಡಿದ್ದರೇನೋ. ಅದಕ್ಕೆ ಈ ನಿರ್ಧಾರಕ್ಕೂ ಕುಟುಂಬ ಬಂದಿರಬಹುದು. ಒಟ್ಟಾರೆ ನವೀನ್ ಸಾವಿನಲ್ಲೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.