Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಿಯುಸಿ ವಿದ್ಯಾರ್ಥಿಗಳಿಗೆ ನವ ಚೈತನ್ಯ :  ಚೈತನ್ಯ ಪಿಯು ಕಾಲೇಜು

Facebook
Twitter
Telegram
WhatsApp

ಚಿತ್ರದುರ್ಗದ ಯಾದವ ಮಠದ ಅಂಗಳದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭ

ಮಲೆನಾಡ ಸೊಬಗು ನೆನಪಿಸುವ ಚೈತನ್ಯ ಪಿಯು ಕಾಲೇಜ್

ಗುಣಮಟ್ಟದ ಶಿಕ್ಷಣ ಸಂಸ್ಥೆಯ ಮೂಲ ಗುರಿ

ಬಯಲುಸೀಮೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಣ

ಚಿತ್ರದುರ್ಗ ಜಿಲ್ಲೆಯ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಂಗಳೂರು, ಬೆಂಗಳೂರು ಸೇರಿದಂತೆ  ದೂರದ ಊರುಗಳತ್ತ ಕಣ್ಣಾಯಿಸುವುದು ಸಾಮಾನ್ಯವಾಗಿದೆ.
ಅತ್ಯಾಧುನೀಕ ಮೂಲ ಸೌಕರ್ಯ ಹೊಂದಿದ ಕಾಲೇಜು, ವಿಶಾಲವಾದ ಮೈದಾನ, ಗಿಡ-ಮರಗಳ ಸೊಬಗು, ಉತ್ತಮ ಕ್ಯಾಂಪಸ್, ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಶಿಕ್ಷಣ ಸಂಸ್ಥೆ ಹುಡುಕಿಕೊಂಡು ದೊಡ್ಡ ದೊಡ್ಡ ನಗರ, ಮಲೆನಾಡ ಪ್ರದೇಶ… ಹೀಗೆ ತಮಗೆ ಸರಿ ಅನಿಸಿದ ಊರುಗಳತ್ತ ಚಿತ್ರದುರ್ಗ ಜಿಲ್ಲೆಯ ಜನ ತಮ್ಮ ಮಕ್ಕಳ ಶಿಕ್ಷಣಕ್ಕೆ ಬುನಾದಿ ಹಾಕಲು ತೆರಳುವುದು ಪ್ರತಿ ವರ್ಷ ಕಾಣಬಹುದಾಗಿದೆ.

ಇದಕ್ಕೆ ಪ್ರಮುಖ ಕಾರಣ ಚಿತ್ರದುರ್ಗ ಜಿಲ್ಲೆಯಲ್ಲೊಂದು ಒಳ್ಳೆಯ ಕಾಲೇಜ್ ಇಲ್ಲವೆಂಬುದು ಜನರ ಆರೋಪ, ಕೊರಗು….

ಈ ಆರೋಪ, ಜಿಲ್ಲೆಯ ಜನರ ಕೊರಗನ್ನು ಶಾಶ್ವತವಾಗಿ ಅಳಿಸಿಹಾಕಲು ಚಿತ್ರದುರ್ಗದ ಶ್ರೀಹರಿ ಎಜುಕೇಶನ್ ಟ್ರಸ್ಟ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಅದರ ಅಂಗವಾಗಿ ಮೊದಲ ಯತ್ನದಲ್ಲಿಯೇ ಯಶಸ್ಸಿನ ಗುರಿಯತ್ತ ಸಾಗುವ ರೀತಿ ಚಿತ್ರದುರ್ಗ ನಗರದ ಹೊರವಲಯದಲ್ಲಿ ಚೈತನ್ಯ ಪಿಯು ಕಾಲೇಜ್ ಸ್ಥಾಪಿಸಿದೆ.

ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಮಾರ್ಗದಲ್ಲಿರುವ ಶ್ರೀ ಯಾದವ ಮಠದ ಆವರಣದ ಎತ್ತರದ ಪ್ರದೇಶ, ಮಲೆನಾಡು ಸೊಬಗು ನೆನಪಿಸುವ ವಾತಾವರಣದಲ್ಲಿ, ವಿಶಾಲವಾದ ಗುಣಮಟ್ಟದ ಕಟ್ಟಡ ಈಗಾಗಲೇ ತಲೆ ಎತ್ತಿದೆ.

ಬಯಲುಸೀಮೆ ಮಕ್ಕಳ ಶ್ರೇಯೋಭಿವೃದ್ಧಿಯ ಕನಸನ್ನೊತ್ತು ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಇಟ್ಟಿರುವ ಚೈತನ್ಯ ಪಿಯು ಕಾಲೇಜ್, ಆರಂಭಕ್ಕೆ ಮುನ್ನವೇ ಜನರ ಮನ ಗೆದ್ದಿದೆ.

ಕಾಲೇಜ್ ಲ್ಲಿ ಹಾಸ್ಟೆಲ್ ವ್ಯವಸ್ಥೆ, ಮನೆಯಿಂದ ಓಡಾಡುವ ವಿದ್ಯಾರ್ಥಿಗಳಿಗೆ ಊಟ, ತಿಂಡಿ ಸಮಸ್ಯೆ ಆಗದಂತೆ ಕ್ಯಾಂಟೀನ್ ವ್ಯವಸ್ಥೆ ಈಗಾಗಲೇ ಸಿದ್ಧಪಡಿಸಲಾಗಿದೆ. ಮುಖ್ಯವಾಗಿ ಅಪರವಾದ ಜ್ಞಾನ ಹೊಂದಿರುವ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮಿಸುವ ಶಿಕ್ಷಕ ವರ್ಗ ಇಲ್ಲಿರುವುದು ವಿಶೇಷ.

ಜತೆಗೆ ಮಕ್ಕಳ ಆಟಪಾಠ ಜತೆಗೆ ಮಕ್ಕಳ ಚಲನವಲನದ ಮೇಲೆ ಕಣ್ಣೀಡಲು, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಅಡಗಿರುವ ಪ್ರತಿಭೆ ಹೊರಹೊಮ್ಮುವಂತೆ ಮಾಡಲು ವಿಶೇಷ ಸಿಬ್ಬಂದಿಯೇ ಇಲ್ಲಿರುವುದು  ಕಾಲೇಜಿನ ವಿಶೇಷತೆ.

ಮಕ್ಕಳಲ್ಲಿ ಅಂಕ ಗಳಿಕೆಯ ಛಲ ಮೂಡಿಸುವ ಜೊತೆಗೆ ಅವರಲ್ಲಿ ಭವಿಷ್ಯದ ಬದುಕು ರೂಪಿಸುವ ಮಾನಸಿಕ ಸಾಮರ್ಥ್ಯ ತುಂಬುವ ಕೆಲಸ ಮಾಡಲು ವಿವಿಧ ರೀತಿ ಚಟುವಟಿಕೆ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಿ, ಅದನ್ನು ಪಾಲಕರಿಗೆ ಆರಂಭದಲ್ಲಿಯೇ ಮನದಟ್ಟು ಮಾಡಿಕೊಡುವುದು ಕಾಲೇಜ್ ಹೆಗ್ಗಳಿಕೆ ಆಗಿದೆ.

ಸಾಂಸ್ಕೃತಿಕ, ಸಾಹಿತ್ಯ, ಕ್ರೀಡಾಕೂಟ ಸೇರಿ ವಿವಿಧ ಚಟುವಟಿಕೆಯಲ್ಲಿ ಮಕ್ಕಳನ್ನು ಬಿಡುವು ರಹಿತ, ಶ್ರಮವಿಲ್ಲದಂತೆ ಮಕ್ಕಳು ಉಲ್ಲಾಸದಿಂದ ಎಲ್ಲ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಕಾಲೇಜ್ ಆರಂಭಿಸಿರುವುದು ವಿಶೇಷ.

***ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ

ಐತಿಹಾಸಿಕ ನಗರಿ, ಕೋಟೆನಾಡಿನಲ್ಲಿ ವಿನೂತನವಾಗಿ ಆರಂಭವಾಗಿರುವ ಚೈತನ್ಯ ಪದವಿ ಪೂರ್ವ ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಕನಸು ನನಸಾಗಿಸಲು ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.

 

***ವಿಜ್ಞಾನ, ವಾಣಿಜ್ಯ ವಿಭಾಗ

ಪ್ರಸಕ್ತ 2022-23 ಸಾಲಿಗೆ ವಿಜ್ಞಾನ ವಿಭಾಗದಲ್ಲಿ (PCMB  ಮತ್ತು PCMcs) PUC+NEET+KCET ? + JEE

ವಾಣಿಜ್ಯ ವಿಭಾಗ ( EBAS), PUC+CA/CPT+IBPS

ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ
ಅನ್ವಯವಾಗುಂತೆ ವಿಜ್ಞಾನದ ವಿದ್ಯಾರ್ಥಿಗಳಿಗೆಪಠ್ಯದ ಜೊತೆ-ಜೊತೆಗೆ NEET, JEE  ಮತ್ತು KCET ಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ ತರಗತಿಗಳೊಂದಿಗೆ ಪ್ರಶ್ನೋತ್ತರಗಳ ತರಬೇತಿ ನೀಡುತ್ತೇವೆ.

ಕಲಿಕಾ ಸಾಮಗ್ರಿಗಳ ಜೊತೆಗೆ ಪ್ರತಿಯೊಬ್ಬ
ವಿದ್ಯಾರ್ಥಿಯ ಕಲಿಕೆಯನ್ನು ವೈಯಕ್ತಿಕವಾಗಿ
ಗಮನಿಸಲಾಗುತ್ತದೆ. ಬೆಂಗಳೂರು ಹಾಗೂ
ದೆಹಲಿಯಲ್ಲಿ ಪರಿಣಿತಿ ಹೊಂದಿದ ಮತ್ತು ನುರಿತ ಪ್ರಾಧ್ಯಾಪಕರಿಂದಲೂ ತರಬೇತಿ ನೀಡಲಾಗುತ್ತದೆ.

**** ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ತಮ ಕೋಚಿಂಗ್

ವಾಣಿಜ್ಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ (IBPS/SBI/BANKING EXAMS) ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಅನುಭವಿ ಮತ್ತು ನುರಿತ ಉಪನ್ಯಾಸಕರು ಇಲ್ಲಿರುವುದು ವಿಶೇಷ.

ಕನ್ನಡ, ಇಂಗ್ಲಿಷ್, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಕಂಪ್ಯೂಟರ್, ಅರ್ಥಶಾಸ್ತ್ರ, ಬುಸಿನಸ್ ಸ್ಟಡೀಸ್, ಅಕೌಂಟೆನ್ಸ್, ಸ್ಟ್ಯಾಟ್ಸ್.

ಅರ್ಹತೆ: ಪದವಿ ಹೊಂದಿದ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.

(B.COM/BA/B.Sc/BBM/BCA/BBA/M.Com/MA/M.Sc/MBA/ME/MCA)

ಅತ್ಯುತ್ತಮ ತರಬೇತಿ ನೀಡಲಾಗುವುದು.

ಉತ್ತಮ ಗುಣಮಟ್ಟದ ಕೋಚಿಂಗ್/ಟ್ರೈನಿಂಗ್. ಕೋಚಿಂಗ್/ಟ್ರೈನಿಂಗ್ ಸಂಬಂಧಪಟ್ಟ ಕೈಪಿಡಿ, ಪುಸ್ತಕಗಳು ವಿತರಣೆ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಅತ್ಯುತ್ತಮ ಮಾರ್ಗದರ್ಶನ ನೀಡುವುದು ಇಲ್ಲಿನ ವಿಶೇಷ.

***ಗುಣಮಟ್ಟದ ಹಾಸ್ಟೆಲ್, ಕ್ಯಾಂಟೀನ್ ವ್ಯವಸ್ಥೆ

ಕಾಲೇಜಿನಲ್ಲಿ ಶುಚಿ ಮತ್ತು  ರುಚಿಯೊಂದಿಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ಕ್ಯಾಂಟೀನ್ ವ್ಯವಸ್ಥೆ, ಅತ್ಯುತ್ತಮ ಬಸ್ ಸೌಲಭ್ಯ, ಏರ್‍ಕಂಡಿಷನಿಂಗ್ ಕ್ಲಾಸ್ ರೂಮ್ ಗಳು, ಅತ್ಯುತ್ತಮ ಲ್ಯಾಬ್ ವ್ಯವಸ್ಥೆ, ವಿಶಾಲವಾದ ಆಟದ ಮೈದಾನ ಇರುವುದು ಕಾಲೇಜಿನ ವಿಶೇಷತೆ.

ಜಗತ್ತಿನ ಪ್ರತಿಯೊಂದು ಯಶಸ್ವಿಗೆ ಕಾರಣ ಶಿಕ್ಷಣ. ಶಿಕ್ಷಣದೊಂದಿಗೆ ಮಾತ್ರವೇ ಬದುಕಿಗೆ ಒಂದು ಅರ್ಥ. ಇಂತಹ ಅರ್ಥಪೂರ್ಣ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಗುರಿ ಮುಟ್ಟುವ  ಕಲಿಕೆಯನ್ನು ನೀಡುವುದೇ ನಮ್ಮ ಕಾಲೇಜಿನ ಧ್ಯೇಯವಾಗಿದೆ.
– ಎಸ್.ಎಂ.ಮಂಜುನಾಥ ಶೆಟ್ಟಿ ಅಧ್ಯಕ್ಷರು, ಶ್ರೀಹರಿ ಎಜುಕೇಶನ್ ಟ್ರಸ್ಟ್

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಕನಸಿನೊಂದಿಗೆ ಸಂಸ್ಥೆ ಆರಂಭಿಸಿದ್ದೇವೆ. ಜಿಲ್ಲೆಯ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂಬುದು ನಮ್ನ ಗುರಿ.
– ಎಸ್.ಎಂ.ಮಧು ಕಾರ್ಯದರ್ಶಿ, ಶ್ರೀಹರಿ ಎಜುಕೇಶನ್ ಟ್ರಸ್ಟ್

Features

Limited intake 50 per  batch

Experinced & Separate NEET/JEE/KCET faculty

Complete Study material along with Supplementary material

Individual Attention

Doubt Solving Sessions With Senior faculty

Daily Practice Tests & Chapter wise Examination for all Subjects

Weekly Cumulative Examination

Result Analysis & Counselling

Neet Mock test

Separate Hostel facility for Boys & Girls Within Campus

Safe Campus With 24*7 medical facility

Canteen, Busfacility available

Air Conditioned Classrooms

We are giving Committed Education System.

 

ಚೈತನ್ಯ ಪಿಯು ಕಾಲೇಜ್, ಶ್ರೀ ಯಾದವಾನಂದ ಮಠ, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ-577601

ಮೊ.ನಂ: 9886664294,
9164166555, 8660276541,

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!