ನೈಸರ್ಗಿಕ ಅಂತರ್ಜಲ ಬುಗ್ಗೆಗಳು ಅವುಗಳ ಹಿನ್ನೆಲೆ : ಜೆ. ಪರಶುರಾಮ ಅವರ ವಿಶೇಷ ಲೇಖನ

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ನೈಸರ್ಗಿಕ ಬುಗ್ಗೆ (Natural springs) ಎಂದರೆ ಭೂಮಿಯ ಆಳದಿಂದ ಶುದ್ಧ ನೀರು ಸಹಜವಾಗಿ ಮೇಲಕ್ಕೆ ಚಿಮ್ಮಿ ಹರಿಯುವ ಸ್ಥಳವಾಗಿದೆ. ಇದನ್ನು ಚಿಲುಮರ ಬುಗ್ಗೆ, ಒರತೆ, ನೈಸರ್ಗಿಕ ಜಲಧಾರೆ ಎನ್ನುತ್ತಾರೆ. ಇದು ಜಲಚಕ್ರದ ಒಂದು ಭಾಗವಾಗಿ, ಮಳೆನೀರು ಭೂಮಿಯೊಳಗೆ ಇಂಗಿ, ಕಲ್ಲು ಮತ್ತು ಮಣ್ಣಿನ ಪದರಗಳ ಮೂಲಕ ಶೋಧಿಸಲ್ಪಟ್ಟ ಜಲಚರ ಬಂಡಾರ ಎಂದು ಭೂಗರ್ಭದ ಜಲಸಂಗ್ರಹದಲ್ಲಿ ಸೇರಿ, ಒತ್ತಡದಿಂದ ಭೂಮಿಯ ಮೇಲೈಗೆ ಮರಳುವ ಒಂದು ಕ್ರಿಯೆ. ಭೂಮಿಯ ಮೇಲೈಯಲ್ಲಿನ ಬಿರುಕುಗಳು, ಸೀಳುಗಳು ಅಥವಾ ಬಂಡೆಗಳ ನಡುವಿನ ರಂದ್ರಗಳ ಮೂಲಕ ಅಂತರ್ಜಲವು ಸುಲಭವಾಗಿ ಮೇಲೈಗೆ ಬರುತ್ತದೆ. ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ ಎತ್ತರದ ಜಾಗದಲಲಿ ಇಂಗಿದ ನೀರು, ಇಳಿಜಾರಿನ ಕಾರಣಕ್ಕೆ ಭೂಮಿಯ ಅಡಿಯಲ್ಲಿ ಪ್ರಯಾಣಿಸಿ ತಗ್ಗು ಪ್ರದೇಶಗಳಲ್ಲಿ ಒರತೆ ರೂಪದಲ್ಲಿ ಹೊರ ಬರುತ್ತದೆ. ಕೆಲವು ಚಿಲುಮೆಗಳಲ್ಲಿ ಬಿಸಿನೀರು ಬರುತ್ತದೆ. ಇದಕ್ಕೆ ಮುಖ್ಯ ಕಾರಣಗಳು, ಭೂಮಿಯ ಆಳದಲ್ಲಿನ ಜ್ವಾಲಾಮುಖಿ ಅಥವಾ ಬಿಸಿ ಬಂಡೆಗಳ ಶಾಖದಿಂದ ಬಿಸಿಯಾಗುತ್ತವೆ. ನಂತರ ಈ ನೀರು ಮೇಲೈಗೆ ಬರುತ್ತದೆ.

ಉತ್ತರ ಭಾರತದಲ್ಲಿರುವ ಬಿಸಿನೀರಿನ ಬುಗ್ಗೆಗಳು ಭೂಮಿಯೊಳಗಿನ ಶಾಖದಿಂದ ರೂಪುಗೊಂಡು ಅದ್ಭುತ ನೈಸರ್ಗಿಕ ಆಕರ್ಷಣೆಗಳಾಗಿದ್ದು, ಮುಖ್ಯವಾಗಿ ಹಿಮಾಚಲ ಪ್ರದೇಶದ ಮಣಿಕರನಾ ಉತ್ತರಾಖಂಡದ ಗೌರಿಕುಂಡ ಮತ್ತು ಜಮ್ಮುಕಾಶ್ಮೀರದಲ್ಲೂ ಇವೆ. ಇವುಗಳಲ್ಲಿ ಹಲವು ಪವಿತ್ರ ಮತ್ತು ಪ್ರವಾಸಿ ತಾಣಗಳಾಗಿದ್ದು, ಪಾರ್ವತಿ ಕಣಿವೆ, ಗಂಗಾ ಬಯಲು ಮುಂತಾದ ಕಡೆಗಳಲ್ಲಿ ಕಂಡುಬರುತ್ತವೆ. ಈ ಬಿಸಿನೀರು ಚರ್ಮದ ರೋಗಗಳಿಗೆ ಮತ್ತು ಮನಸ್ಸಿಗೆ ಹಿತನೀಡುತ್ತದೆ.

ಕರ್ನಾಟಕದಲ್ಲಿ ಕೆಲವು ಪ್ರಮುಖ ಬುಗ್ಗೆಗಳಿವೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬೇಂದ್ರ ತೀರ್ಥ ಮತ್ತು ಪಣೇಕಲ್ ನಂತಹ ಬಿಸಿನೀರಿನ ಬುಗ್ಗೆಗಳು ಹೆಸರುವಾಸಿಯಾಗಿವೆ. ಬೇಂದ್ರತೀರ್ಥ ಪುತ್ತೂರಿನ ಸಮೀಪದಲ್ಲಿದೆ ಮತ್ತು ಇದು ಗಂದಕಾಂಶ ಹೊಂದಿದ್ದು, ಚಿಕಿತ್ಸಾಗುಣಗಳನ್ನು ಹೊಂದಿದೆ. ಇದನ್ನು ಕರ್ನಾಟಕ ರಾಜ್ಯ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡೆಯಲಾಗಿದೆ.

ಪಣೇಕಲ್ಲು ಕೂಡ ಬಿಸಿನೀರಿನ ಬುಗ್ಗೆಯಾಗಿದ್ದು, ಅಪರೂಪದ ಜೈವಿಕ ವೈವಿದ್ಯತೆ ಹೊಂದಿದೆ. ಇಲ್ಲಿನ ನೀರಿನ ತಾಪಮಾನ ಕರಗಿದೆ. ಆಮ್ಲಜನಕ, ಗಂದಕರ ಅಂಶ ಮತ್ತು ಜೈವಿಕ ವೈವಿಧ್ಯೆಯ ಬಗ್ಗೆ ಅಧ್ಯಯನಗಳು ನಡೆದಿವೆ. ಇಲ್ಲಿ ಸಲ್ಫರ್ ಅಕ್ಸಡ್‍ನಿಂದ ಬ್ಯಾಕ್ಟೀರಿಯಗಳು ಪತ್ತೆಯಾಗಿವೆ.

ಈ ಬುಗ್ಗೆಗಳು ಕರ್ನಾಟಕದ ಭೂಗರ್ಭಸ್ವಾಸ್ತ್ರ ಮತ್ತು ಜೈವಿಕ ವೈವಿಧ್ಯತೆಯ ದೃಷ್ಟಿಯಿಂದ ಬಹಳ ಮುಖ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ.

Share This Article