ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ : ಚಿರಾಗ್, ಸಾತ್ವಿಕ್ ಗೆ ಖೇಲ್ ರತ್ನ, ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ

3 Min Read

 

ಸುದ್ದಿಒನ್, ನವದೆಹಲಿ, ಡಿಸೆಂಬರ್.20 : ಕೇಂದ್ರ ಸರ್ಕಾರವು 2023 ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯವು ಪ್ರಕಟಿಸಿದೆ.

ಈ ವರ್ಷ ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಸಾಧನೆ ಮಾಡಿದ ಇಬ್ಬರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಲಾಗಿದೆ. ಕೆಲ ದಿನಗಳ ಹಿಂದೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಚಿರಾಗ್ ಚಂದ್ರಶೇಖರ್ ಶೆಟ್ಟಿ ಮತ್ತು ರಾಂಕಿರೆಡ್ಡಿ ಸಾತ್ವಿಕ್ ಸಾಯಿರಾಜ್ ಅವರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.

ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿಗಳ ಜೊತೆಗೆ, ಕೇಂದ್ರವು ದ್ರೋಣಾಚಾರ್ಯ (ನಿಯಮಿತ, ಜೀವಮಾನ) ಮತ್ತು ಧ್ಯಾನಚಂದ್ (ಜೀವಮಾನದ ಸಾಧನೆ) ಪ್ರಶಸ್ತಿಗಳನ್ನು ಸಹ ಘೋಷಿಸಿದೆ. ಎಲ್ಲಾ ಪ್ರಶಸ್ತಿ ಪುರಸ್ಕೃತರು ಮುಂದಿನ ವರ್ಷ (2024) ಜನವರಿ 9 ರಂದು ಭಾರತದ ರಾಷ್ಟ್ರಪತಿಯವರಿಂದ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ.

ದೇಶದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಇಬ್ಬರು ಬ್ಯಾಡ್ಮಿಂಟನ್ ಆಟಗಾರರು ಆಯ್ಕೆಯಾಗಿದ್ದಾರೆ.

ಮೇಜ‌ರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗಳು 2023:

1. ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್)

2. ರಾಂಕಿರೆಡ್ಡಿ ಸಾತ್ವಿಕ್ಸಾಯಿರಾಜ್ (ಬ್ಯಾಡ್ಮಿಂಟನ್)

ಅರ್ಜುನ ಪ್ರಶಸ್ತಿಗಳು 2023:

1. ಓಜಸ್ ಪ್ರವೀಣ್ ಡಿಯೋಟಾಲೆ (ಬಿಲ್ಲುಗಾರಿಕೆ)

2. ಅದಿತಿ ಗೋಪಿಚಂದ್ ಸ್ವಾಮಿ (ಬಿಲ್ಲುಗಾರಿಕೆ)

3. ಎಂ ಶ್ರೀಶಂಕರ್ (ಅಥ್ಲೆಟಿಕ್ಸ್‌)

4. ಪಾರುಲ್ ಚೌಧರಿ (ಅಥ್ಲೆಟಿಕ್ಸ್‌)

5. ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್)

6. ಆರ್ ವೈಶಾಲಿ (ಚೆಸ್‌)

7. ಮೊಹಮ್ಮದ್ ಶಮಿ (ಕ್ರಿಕೆಟ್)

8. ಅನುಷಾ ಅಗರವಾಲಾ (ಈಕೆ.ಸಿ.ಯನ್)

9. ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)

10. ದೀಕ್ಷಾ ದಾಗರ್ (ಗಾಲ್ಫ್)

11. ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ)

12. ಪುಬ್ರಂಬಂ ಸುಶೀಲಾ ಚಾನು (ಹಾಕಿ)

13. ಪವನ್ ಕುಮಾರ್ (ಕಬಡ್ಡಿ)

14. ರಿತು ನೇಗಿ (ಕಬಡ್ಡಿ)

15. ನಸ್ರಿನ್ (ಖೋ ಖೋ)

16. ಪಿಂಕಿ (ಲಾನ್ ಬೌಲ್ಸ್)

17. ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)

18. ಉಷಾ ಸಿಂಗ್ (ಶೂಟಿಂಗ್)

19. ಹರಿಂದರ್ ಪಾಲ್ ಸಿಂಗ್‌ ಸಂಧು (ಸ್ಕ್ಯಾಷ್)

20. ಅಹಿಕಾ ಮುಖರ್ಜಿ (ಟೇಬಲ್ ಟೆನಿಸ್)

21. ಸುನಿಲ್ ಕುಮಾ‌ರ್ (ಕುಸ್ತಿ)

22. ಆಂಟಿಮ್ (ಕುಸ್ತಿ)

23. ನೌರೆಮ್ ರೋಶಿಬಿನಾ ದೇವಿ (ಉಶು)

24. ಶೀತಲ್ ದೇವಿ (ಪ್ಯಾರಾ ಆರ್ಚರಿ)

25. ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂಧ ಕ್ರಿಕೆಟ್)

26. ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್)

 

ದ್ರೋಣಾಚಾರ್ಯ ಪ್ರಶಸ್ತಿಗಳು 2023 (ನಿಯಮಿತ):

1. ಲಲಿತ್ ಕುಮಾ‌ರ್ (ಕುಸ್ತಿ)

2. ಆರ್ ಬಿ ರಮೇಶ್‌ (ಚೆಸ್)

3. ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್‌)

4. ಶಿವೇಂದ್ರ ಸಿಂಗ್ (ಹಾಕಿ)

5. ಗಣೇಶ್ ಪ್ರಭಾಕರ್ ದೇವರುಖ್ಯರ್ (ಮಲ್ಲಖಾಂಬ್)

ದ್ರೋಣಾಚಾರ್ಯ ಪ್ರಶಸ್ತಿಗಳು 2023 (ಜೀವಮಾನ):

1. ಜಕ್ಕೀರತ್ ಸಿಂಗ್‌ ಗ್ರೆವಾಲ್ (ಗಾಲ್ಫ್)

2. ಈ ಭಾಸ್ಕರನ್ (ಕಬಡ್ಡಿ)

3. ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್)

 

ಧ್ಯಾನ್ ಚಂದ್ ಪ್ರಶಸ್ತಿಗಳು 2023 (ಜೀವಮಾನ):

1. ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್)

2. ವಿನೀತ್ ಕುಮಾರ್ ಶರ್ಮಾ (ಹಾಕಿ)

3. ಕವಿತಾ ಸೆಲ್ವರಾಜ್ (ಕಬಡ್ಡಿ)

ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ 2023:

1. ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ (ವಿಜೇತ)

2. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್ (ಮೊದಲ ರನ್ನರ್ ಅಪ್)

3. ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ (ಎರಡನೇ ರನ್ನರ್ ಅಪ್)

Share This Article
Leave a Comment

Leave a Reply

Your email address will not be published. Required fields are marked *