ಸುದ್ದಿಒನ್, ಚಿತ್ರದುರ್ಗ : ಹರಪ್ಪನಹಳ್ಳಿಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 13:09:2024 ರಿಂದ 16:09:2024 ರವರೆಗೆ ಆಯೋಜಿಸಿದ್ದ “ಸಿಬಿಎಸ್‍ಇ ಜ್ಹೋನಲ್ ಲೆವೆಲ್ ಚೆಸ್” ಪಂದ್ಯಾವಳಿಯಲ್ಲಿ ಎಸ್‍ಆರ್‍ಎಸ್ ಹೆರಿಟೇಜ್ ಶಾಲೆಯ ಅಪೇಕ್ಷ ಎಸ್ ಆರ್(7ನೇತರಗತಿ) ನೌಮಿಕ(5ನೇ ತರಗತಿ) ಹಾಸಿನಿ ಮತ್ತು ಸಂಜನ(9ನೇತರಗತಿ) ವಿದ್ಯಾರ್ಥಿನಿಯರು ಭಾಗವಹಿಸಿ, 17ರ ವಯೋಮಿತಿಯ ಒಳಗಿನ ವೈಯಕ್ತಿಕ ಬೋರ್ಡಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ದಿನಾಂಕ:25:10:2024 ರಿಂದ 28:10:2024ರಲ್ಲಿ “ಪಂಜಾಬ್‍ನ ಜಲಂದರ್‍ನ ಲಾ ಬ್ಲಾಸಮ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಯು” ಜರುಗಿದ್ದು ಅಪೇಕ್ಷ ಎಸ್‍ಆರ್(7ನೇತರಗತಿ) ನೌಮಿಕ(5ನೇತರಗತಿ) ಹಾಸಿನಿ ಮತ್ತು ಸಂಜನ(9ನೇತರಗತಿ) ವಿದ್ಯಾರ್ಥಿನಿಯರು ಭಾಗವಹಿಸಿದ್ದು, ವೈಯಕ್ತಿಕ ಎರಡನೇ ಬೋರ್ಡ್ ವಿಭಾಗದಲ್ಲಿ ಅಪೇಕ್ಷ ಎಸ್ ಆರ್ ಪ್ರಥಮ ಸ್ಥಾನಗಳಿಸಿದ್ದು, 5 ಸುತ್ತಿನಲ್ಲಿ 4.5 ಪಾಯಿಂಟ್‍ಗಳನ್ನು ತನ್ನ ಮುಡಿಗೇರಿಸಿಕೊಂಡು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾಳೆ.
ಈ ಮಕ್ಕಳ ಸಾಧನೆಗೆ ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ ಎಲ್ ಮತ್ತು ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್ ಹಾಗೂ ಪ್ರಾಂಶುಪಾಲರಾದ ಪ್ರಭಾಕರ್ ಎಮ್ ಎಸ್ ಬೋಧಕ ಹಾಗೂ ಬೋಧಕೇತರ ವರ್ಗದವರು ವಿದ್ಯಾರ್ಥಿನಿಯರಿಗೆ ಹಾಗೂ ಚೆಸ್ ಕೋಚ್‍ಗಳಾದ ತಿಮ್ಮೆಶ್, ಪಾರ್ವತಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.